ಮಡಿಕೇರಿ, ಅ. ೧೦: ಜಿಲ್ಲೆಯ ಏಕೈಕ ನಗರಸಭೆಯಾಗಿರುವ ಮಡಿಕೇರಿಗೆ ಕೊನೆಗೂ ಜನಪ್ರತಿನಿಧಿಗಳ ಆಡಳಿತಕ್ಕೆ ಮುಹೂರ್ತ ಕೂಡಿಬಂದಿದೆ. ಕಳೆದ ಸಾಲಿನ ಅಧಿಕಾರಾವಧಿ ಮುಗಿದ ಬಳಿಕ ಹಲವಾರು ಕಾರಣಗಳಿಂದಾಗಿ ನಗರಸಭೆಗೆ ಚುನಾವಣೆ ವಿಳಂಬವಾಗಿತ್ತು. ೨೦೧೯ ರ ಮಾರ್ಚ್ನಲ್ಲೇ ಈ ಹಿಂದಿನ ಆಡಳಿತ ಮಂಡಳಿಯ ಅಧಿಕಾರ ಕೊನೆಯಾಗಿತ್ತು.