ಕೂಡಿಗೆ, ಅ. ೧೦: ಉತ್ತರ ಕೊಡಗಿನ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕವಾಗಿ ಮಳೆಯನ್ನೇ ಅವಲಂಭಿಸಿ ಹೆಚ್ಚು ಮೆಕ್ಕೆ ಜೋಳವನ್ನು ಬೆಳೆಯುವ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜೋಳದ ಬೆಳೆ ಹೊಲದಲ್ಲಿ ಮೊಳಕೆ ಬರುವಂತಹ ಪ್ರಸಂಗ ಎದುರಾಗಿದೆ. ಅಲ್ಲದೆ ಬೆಳೆಯಲ್ಲಿಯು ಭಾರಿ ಕುಸಿತ ಉಂಟಾಗಿದೆ.

ಈ ಸಾಲಿನಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮೆಕ್ಕೆಜೋಳವನ್ನು ಸಿದ್ದಲಿಂಗಪುರ, ಅಳುವಾರ, ಆರನೇ ಹೊಸಕೋಟೆ, ಸೀಗೆಹೊಸೂರು, ಮಾರೂರು, ತೊರೆನೂರು, ಹಳೆಕೋಟೆ, ಚಿಕ್ಕತ್ತೂರು ದೊಡ್ಡತ್ತೂರು, ಬಾಣವಾರ ವ್ಯಾಪ್ತಿಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಮಳೆಯನ್ನೇ ಅವಲಂಭಿಸಿ ಜೋಳದ ಬೆಳೆಯನ್ನು ಬೆಳೆಯಲಾಗಿದೆ ಈ ಸಾಲಿನಲ್ಲಿ ಬಿತ್ತನೆ ಮಾಡಿದ ಸಂದರ್ಭದಿAದ ಕಟ್ಟಾವು ಮಾಡುವವರೆಗೂ ಹದವಾದ ಮಳೆಯಿಂದಾಗಿ ಬೆಳೆಯು ಉತ್ತಮವಾಗಿ ಬಂದಿದೆ.

ಆದರೆ ಈ ಸಾಲಿನಲ್ಲಿ ಹೈಬ್ರೀಡ್ ಜೋಳದ ಬೆಳೆಯನ್ನು ಈಗಾಗಲೇ ಕಟಾವು ಬಂದು ೧೫ ದಿನಗಳೆ ಕಳೆದರೂ ಸಹ ಈ ಭಾಗದ ರೈತರು ಜೋಳದ ಬೆಳೆಯನ್ನು ಕಟಾವು ಮಾಡಿ ಮಾರಾಟ ಮಾಡಲು ಮಳೆಯಿಂದಾಗಿ ಬಾರಿ ತೊಂದರೆ ಆಗುತ್ತಿವೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಗುಡುಗು-ಮಿಂಚಿನ ಮಳೆಯಿಂದಾಗಿ ಜೋಳ ಹೊಲವು ನೀರಿನ ಗದ್ದೆಗಳಾಗಿದೆ. ಇದರಲ್ಲಿ ಕೆಲವು ರೈತರು ಕಟಾವು ಮಾಡಿದ ಜೋಳದ ಬೆಳೆಯನ್ನು ಬಿಡಿಸಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಜೋಳದ ಕಾಳುಗಳನ್ನು ಬಿಡಿಸುವ ಆಧುನಿಕ ಯಂತವನ್ನು ಟ್ರಾö್ಯಕ್ಟರ್‌ಗೆ ಅಳವಡಿಕೆ ಮಾಡಲಾಗಿದೆ ಆದರೆ ಯಂತ್ರದ ಟ್ರಾö್ಯಕ್ಟರ್ ಹೊಲಗಳಿಗೆ ಹೋಗಲು ಸಾಧ್ಯವಾಗದೆ ಜೋಳದ ಬೆಳೆ ಹೊಲದಲ್ಲೇ ಬಿದ್ದಿದೆ.

ಅಕಾಲಿಕ ಮಳೆಯಿಂದಾಗಿ ಜೋಳವನ್ನು ಖರೀದಿಸಲು ಖರೀದಿದಾರರೇ ಬರುತ್ತಿಲ್ಲ. ಅಲ್ಲದೆ ಜೋಳದ ಕಾಳುಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬೆಲೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಕ್ವಿಂಟಾಲ್ ಜೋಳಕ್ಕೆ ೧೫೦೦-೬೦೦ ರೂ.ಗಳಷ್ಟು ಇತ್ತು. ಆದರೆ ಈ ಸಾಲಿನಲ್ಲಿ ಅಧಿಕ ಖರ್ಚಿನ ನಡುವೆ ಬೆಳೆಯು ಉತ್ತಮವಾಗಿ ಬಂದರೂ ಸಹ ಕಟಾವು ಆರಂಭ ದಿನಗಳಿಂದ ಬೆಲೆಯು ಕುಸಿತಗೊಳ್ಳುತ್ತಿದೆ. ಮಳೆಯಿಂದಾಗಿ ಈ ಸಾಲಿನಲ್ಲಿ ೧,೧೦೦- ೧,೨೦೦ ರವರೆಗೆ ಇದೆ. ಆದರೆ ಈ ಭಾಗದ ಅನೇಕ ರೈತರು ಮೆಕ್ಕೆಜೋಳದ ಮಾತ್ತೆಯನ್ನು ಸಂಗ್ರಹ ಮಾಡುವಷ್ಟು ದೊಡ್ಡ ಕೊಠಡಿಯಿಲ್ಲದೆ ಕಡಿಮೆ ಬೆಲೆಯಾದರೂ ಸಹ ಮಾರಾಟ ಮಾಡುವಂತಹ ಪ್ರಸಂಗ ಎದುರಾಗಿದೆ. ಇತ್ತ ಹೊಲದಲ್ಲಿ ಸಂಗ್ರಹ ಮಾಡಿದರೆ ಅಕಾಲಿಕ ಮಳೆಯಿಂದಾಗಿ ಜೋಳದ ಮಾತ್ತೆಗಳು ಮೊಳಕೆ ಬರಲು ಪ್ರಾರಂಭವಾಗುತ್ತಿವೆ. ಇದರಿಂದಾಗಿ ಈ ಭಾಗದ ರೈತರು ಆತಂಕದಲ್ಲಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.