ಮಡಿಕೇರಿ, ಅ. ೧೧: ಅದೆಷ್ಟೋ ಸುಂದರ ಕಾರ್ಯಕ್ರಮಗಳಿಗೆ ಸಾಕ್ಷಿ ಯಾಗಿದ್ದ, ಕೊಡಗಿನ ಮಡಿಕೇರಿಯ ರಾಜಾಸೀಟ್ ಬಳಿ ಇರುವ, ಗಾಂಧಿ ಮೈದಾನದಲ್ಲಿನ ಈ ರಂಗಮAದಿರ ನಿರ್ವಹಣೆ ಇಲ್ಲದೆ ತನ್ನ ಸೌಂದರ್ಯ ಕಳೆದುಕೊಂಡು ಅನಾಥವಾಗಿರುವ ದೃಶ್ಯವಿದು. ತನ್ನ ದೇಹದ ಕಣ್ಣು, ಕಿವಿ, ಕೈ, ಎಲುಬು ಗಳನ್ನು ಸರಿಪಡಿಸಿ ಎಂದು ಅಧಿಕಾರಿ ಗಳಲ್ಲಿ ಮೊರೆಯಿಡುವಂತಿದೆ. ಒಂದು ರೀತಿಯಲ್ಲಿ ಕಾಡು ಬೆಳೆದು, ಪುಂಡ ಪೋಕರಿಗಳಿಗೆ ಆವಾಸಸ್ಥಾನವಾಗಿ, ಮಡಿಕೇರಿ ನಗರದಲ್ಲಿ ನಡೆಯುವ ಕಾಮಗಾರಿಗಳಿಗೆಂದು ಬರುವ ಕಾರ್ಮಿಕರಿಗೆ ಉಳಿದುಕೊಳ್ಳಲು, ಅಡುಗೆ ಮಾಡಿಕೊಳ್ಳಲು, ಮಾದಕ ವ್ಯಸನಿಗಳಿಗೆ ಗುಪ್ತ ಸ್ಥಳವಾಗಿ ಮಾರ್ಪಟ್ಟಿರುವುದು ನಿಜಕ್ಕೂ ಬೇಸರದ ವಿಚಾರ, ಮಡಿಕೇರಿ ಯಲ್ಲಿ ಇರುವುದು ಒಂದು ರಂಗ ಮಂದಿರ. ಆ ರಂಗಮAದಿರವನ್ನೂ ಸುಸಜ್ಜಿತವಾಗಿ ಇಡಲಾಗದೇ ಇರುವುದು ಆ ರಂಗಮAದಿರಕ್ಕೆ ಅಪಮಾನಮಾಡಿದಂತೆ. ಅದೆಷ್ಟೋ ಕೊಡಗಿನ ಜನರು ಇದೇ ವೇದಿಕೆ ಯಲ್ಲಿ ಹಾಡಿ, ಕುಣಿದು, ಕುಪ್ಪಳಿಸಿ, ಭಾಷಣ ಮಾಡಿರಬಹುದಾದ ನೆನಪುಗಳನ್ನು ಹೊತ್ತು ಈ ವೇದಿಕೆ ಈಗ ಇರುವ ಪರಿಸ್ಥಿತಿ ಕಂಡು ಮರುಗುವುದಿದೆ. ದಯವಿಟ್ಟು ಕೊಡಗಿನ ರಾಜಕೀಯ ನಾಯಕರು ಈ ರಂಗಮAಟಪವನ್ನು ಸುಸಜ್ಜಿತ ಗೊಳಿಸುವ ಮನಸ್ಸು ಮಾಡ ಬೇಕಾಗಿದೆ.
-ಚಂದನ್ ನಂದರಬೆಟ್ಟು