ಗೋಣಿಕೊಪ್ಪ ವರದಿ, ಅ.೧೧: ಸರ್ಕಾರಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ೫೦ ವಿದ್ಯಾಸೇತು ಪುಸ್ತಕ ಗಳನ್ನು ವಿತರಣೆ ಮಾಡಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ ಮಾತನಾಡಿ, ಕೊೆÆನಾ ಸೋಂಕು ಶಿಕ್ಷಣಕ್ಕೂ ತೊಡಕ್ಕುಂಟು ಮಾಡಿದೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಪರೀಕ್ಷಾಪೂರ್ವ ಸಿದ್ಧತೆಗೆ ವಿದ್ಯಾಸೇತು ಪುಸ್ತಕ ನೀಡಲಾಗುತ್ತಿದೆ. ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯದಲ್ಲಿ ಸಿದ್ದತೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಕಾರ್ಯದರ್ಶಿ ಸುಭಾಷಿಣಿ, ರೋಟರಿ ಹಿರಿಯ ಡಾ. ಚಂದ್ರಶೇಖರ್, ರೀಟಾ ದೇಚಮ್ಮ, ಅರುಣ್ ತಿಮ್ಮಯ್ಯ, ಕೆ.ಬಿ. ನೆವಿನ್, ವಾಸು ಉತ್ತಪ್ಪ, ಕೆ. ಎನ್. ವಿಜಯ್, ಪಿ.ಬಿ. ಪೂಣಚ್ಚ, ಕಿಶೋರ್ ಮಾದಪ್ಪ, ಮುಖ್ಯ ಶಿಕ್ಷಕಿ ಅರುಣ್ ಆನ್ಸಿ ಡಿಸೋಜ ಇದ್ದರು.