*ಗೋಣಿಕೊಪ್ಪ, ಅ. ೧೦: ಲೋಪಮುದ್ರಾ ದೃಷ್ಠಿ ಕಣ್ಣಿನ ಆಸ್ಪತ್ರೆ ಭಾರತೀಯ ಆರೋಗ್ಯ ಗುಣಮಟ್ಟದ ಘಟಕ ಮಂಡಳಿಯಿAದ ಪ್ರಾಮಾಣಿಕರಣ ಮೌಲ್ಯಮಾಪನ ಹೊಂದಿರುವ ಜಿಲ್ಲೆಯ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೌಮ್ಯ ಗಣೇಶ್ ನಾಣಯ್ಯ ತಿಳಿಸಿದ್ದಾರೆ.

ಲೋಪಮುದ್ರಾ ಹೆಲ್ತ್ಕೇರ್ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ಸೌಮ್ಯ ನಾಣಯ್ಯ ಅವರು, ರೋಗಿ ಸುರಕ್ಷತೆ ಮತ್ತು ಆರೋಗ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೆಹಲಿಯ ಎನ್.ಎ.ಬಿ.ಹೆಚ್. ಮಾನ್ಯತೆ ಮಂಡಳಿ ಲೋಪಮುದ್ರಾ ಆಸ್ಪತ್ರೆಯನ್ನು ಗುರುತಿಸಿದೆ. ಇದು ಇಲ್ಲಿನ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮವಾಗಿ ರಾಷ್ಟಿçÃಯ ಮಾನ್ಯತೆಯನ್ನು ಲೋಪಮುದ್ರಾ ದೃಷ್ಠಿ ಕಣ್ಣಿನ ಆಸ್ಪತ್ರೆ ಪಡೆದುಕೊಂಡಿದೆ. ರಾಜ್ಯದಲ್ಲಿ ಕೇವಲ ೩೦ರಷ್ಟು ಎನ್.ಎ.ಬಿ.ಹೆಚ್. ಮಾನ್ಯತೆಯನ್ನು ಆರೋಗ್ಯ ಕೇಂದ್ರಗಳು ಹೊಂದಿದೆ. ಅದರಲ್ಲಿ ಲೋಪಮುದ್ರಾ ಕಣ್ಣಿನ ಆಸ್ಪತ್ರೆಯು ರಾಷ್ಟಿçÃಯ ಮಾನ್ಯತೆಯನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.