ಮಡಿಕೇರಿ, ಅ. ೧೧: ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ನಂಜರಾಯಪಟ್ಟಣ ಗ್ರಾಮದ ಖಾಸಗಿ ತೋಟದಿಂದ ಅಕ್ರಮವಾಗಿ ಅಶೋಕ ಲೈಲ್ಯಾಂಡ್ ಗೂಡ್ಸ್ ಗಾಡಿ (ಕೆ.ಎ. ೫೫ ಎ. ೧೪೫೪) ರಲ್ಲಿ ೪ ಬೀಟೆ ನಾಟಗಳನ್ನು ತುಂಬಿಸಿಕೊAಡು ಹೋಗುತ್ತಿರುವುದನ್ನು ಪತ್ತೆ ಮಾಡಿ ಈ ಸಂಬAಧ ಮೈಸೂರಿನ ಮಹಮ್ಮದ್ ಇಸ್ಮಾಯಿಲ್ ಹಾಗೂ ಪಿರಿಯಾಪಟ್ಟಣ ಬಳಿಯ ಮುತ್ತೂರಿನ ಮಹಮ್ಮದ್ ಶಫೀಕ್ ಎಂಬವರನ್ನು ಬಂಧಿಸಿ ಬೀಟೆ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ.ಎಸ್. ಸುಬ್ರಾಯ, ಕೆ.ಪಿ. ರಂಜನ್, ಕೆ.ಎನ್. ದೇವಯ್ಯ ಹಾಗೂ ಅರಣ್ಯ ರಕ್ಷಕರಾದ ರವಿ ಉತ್ನಾಳ್, ಸಿದ್ದರಾಮ ನಾಟಿಕಾರ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳಾದ ಅಪ್ಪಸ್ವಾಮಿ, ಸಿದ್ದ, ಕಿರಣ್, ಜಗದೀಶ್ ಪಾಲ್ಗೊಂಡಿದ್ದರು.