*ಗೋಣಿಕೊಪ್ಪ, ಅ. ೧೧: ವೀರಾಜಪೇಟೆ ಮಂಡಲ ಬಿಜೆಪಿ ಯುವಮೋರ್ಚಾ ಮತ್ತು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಸೇವಾ ಸಮರ್ಪಣಾ ಅಭಿಯಾನದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಬಾಳೆಲೆ ವಿಜಯಲಕ್ಷಿ÷್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.

ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕವನ್ ಕಾರ್ಯಪ್ಪ ನೇತೃತ್ವದಲ್ಲಿ ನಡೆದ ಶಿಬಿರಕ್ಕೆ ಬಾಳೆಲೆ ಪದವಿಪೂರ್ವ ಕಾಲೇಜು ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಚಾಲನೆ ನೀಡಿದರು.

ಕೊಡಗು ಜಿಲ್ಲಾ ಮೆಡಿಕಲ್ ಸೆಲ್ ಸಂಚಾಲಕ ಅಯ್ಯಪ್ಪ, ಮಂಡಲ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಉಪಾಧ್ಯಕ್ಷ ಕುಪ್ಪಂಡ ಗಿರೀಶ್, ಬಾಳೆಲೆ ಶಕ್ತಿಕೇಂದ್ರ ಪ್ರಮುಖ್ ಸುಕೇಶ್, ನಿಟ್ಟೂರು ಶಕ್ತಿ ಕೇಂದ್ರ ಪ್ರಮುಖ್ ಶರಿನ್ ಕಾಟಿಮಾಡ, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ನಾಚಪ್ಪ, ವಿವೇಕ್, ತಾಲೂಕು ಯುವ ಮೋರ್ಚಾ ಖಜಾಂಜಿ ನಾಮೆರ ಮೊಣ್ಣಪ್ಪ, ತಾಲೂಕು ಯುವಮೋರ್ಚಾ ಕಾರ್ಯದರ್ಶಿ ದೀಪಕ್‌ಸುಬ್ಬಯ್ಯ, ತಿಮ್ಮಯ್ಯ ಮಚ್ಚಮಾಡ, ತಾಲೂಕು ಸದಸ್ಯರುಗಳು ಹಾಗೂ ಇತರರು ಹಾಜರಿದ್ದರು.