ಕಣಿವೆ, ಅ. ೧೦: ಹಾರಂಗಿ ನದಿಗೆ ಅಡ್ಡಲಾಗಿ ಕೂಡಿಗೆಯ ಬಳಿ ನಿರ್ಮಿಸಿರುವ ಕಬ್ಬಿಣದ ಸೇತುವೆ ಶಿಥಿಲಾವಸ್ಥೆ ತಲುಪುತ್ತಿದೆ.

ನಾಲ್ಕಾರು ದಶಕಗಳ ಹಿಂದೆ ವಾಹನಗಳ ಸೀಮಿತ ಬಳಕೆ ಹಾಗೂ ವಿರಳ ಜನಸಂಖ್ಯೆಯಿದ್ದ ಸಂದರ್ಭ ದಲ್ಲಿ ಸಂಚಾರಕ್ಕೆ ಜನರು ಇದೇ ಸೇತುವೆಯನ್ನು ಅವಲಂಬಿಸಿದ್ದರು. ಹಾಸನ ಹಾಗೂ ಕೊಡಗು ಜಿಲ್ಲೆಯ ಸಂಪರ್ಕಕ್ಕೆ ಇದೇ ಸೇತುವೆ ಪ್ರಮುಖ ಕೊಂಡಿಯಾಗಿತ್ತು.

ಬಳಿಕ ಮೂರು ದಶಕಗಳ ಹಿಂದೆ ವಾಹನಗಳ ಸಂಚಾರ ಅಧಿಕ ಗೊಂಡಿದ್ದರಿAದ ಕಿರುದಾದ ಮತ್ತು ಹಳೆಯದಾಗಿದ್ದ ಈ ಸೇತುವೆ ಶಿಥಿಲಾವಸ್ಥೆ ತಲುಪುವ ಅಪಾಯವನ್ನರಿತ ಒಳನಾಡು ಹಾಗೂ ಲೋಕೋಪಯೋಗಿ ಇಲಾಖೆ ಕೂಡಿಗೆಯ ಈ ಹಳೆಯ ಕಬ್ಬಿಣದ ಸೇತುವೆಗೆ ಹೊಂದಿಕೊAಡAತೆ ಹೊಸ ಸೇತುವೆಯನ್ನು ನಿರ್ಮಿಸಿತ್ತು.

ಈ ಹೊಸ ಸೇತುವೆ ಬಳಕೆಯ ಬಳಿಕ ಹಳೆಯ ಸೇತುವೆ ಕಡೆಗಣಿಸಲ್ಪಟ್ಟಿತ್ತು. ಬಳಿಕ ಈ ಕಬ್ಬಿಣದ ಸೇತುವೆಯ ಇಕ್ಕೆಲಗಳಲ್ಲಿ ಕಾಡು ಗಿಡಗಳು ಬೆಳೆದರೆ, ಇನ್ನೊಂದೆಡೆ ಸ್ಥಳೀಯರು ಅಲ್ಲಲ್ಲಿ ಕಸ ತ್ಯಾಜ್ಯಗಳನ್ನು ಸುರಿದು ಕಲುಷಿತಗೊಳಿಸಿ ಪಾದಚಾರಿ ಗಳು ಕೂಡ ಸಂಚರಿಸಲಾಗದಷ್ಟು ಸೇತುವೆಯ ಪರಿಸರ ಹಾಳಾಗಿತ್ತು.

ಬಳಿಕ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದ ಅವಧಿಯಲ್ಲಿ ಕೆ.ಪಿ. ಚಂದ್ರಕಲಾ ಅವರು ಲೋಕೋಪಯೋಗಿ ಇಲಾಖೆಯ ಮೂಲಕ ಅನುದಾನ ತಂದು ಲಕ್ಷಾಂತರ ರೂಗಳನ್ನು ವ್ಯಯಿಸಿ ವಿರೂಪ ಗೊಂಡಿದ್ದ ಸೇತುವೆಗೆ ಹೊಸತನ ನೀಡಲಾಗಿತ್ತು. ಹಾಗೆಯೇ ಸೇತುವೆಯ ಎರಡು ಬದಿಗಳಲ್ಲಿದ್ದ ಕಬ್ಬಿಣದ ತಡೆಗೋಡೆಗೆ ಕಬ್ಬಿಣದ ತಂತಿಯ ಮೆಷ್ ಅಳವಡಿಸಿ ಅಲ್ಲಲ್ಲಿ ಎರಡು ಸಾಲುಗಳ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಕೂಡಿಗೆ ಹಾಗೂ ಕೂಡುಮಂಗಳೂರು ಅವಳಿ ಗ್ರಾಮ ಪಂಚಾಯಿತಿಗಳ ಸೇತುಬಂಧವಾಗಿರುವ ಈ ಸೇತುವೆಯ ಒಂದು ಬದಿಗೆ ಕೂಡುಮಂಗಳೂರು ಪಂಚಾಯಿತಿ ವಿದ್ಯುತ್ ಬಿಲ್ ಭರಿಸುವಂತೆ ಹಾಗೂ ಮತ್ತೊಂದು ಬದಿಗೆ ಕೂಡಿಗೆ ಪಂಚಾಯಿತಿ ವಿದ್ಯುತ್ ಬಿಲ್ ಭರಿಸುವಂತೆ ಮಾಡಲಾಗಿದೆ. ಆದರೆ ಇದೀಗ ಈ ಸೇತುವೆಗೆ ಅಳವಡಿಸಿರುವ ಕೆಲವು ವಿದ್ಯುತ್ ದೀಪಗಳು ದುರಸ್ಥಿಗೊಂಡಿವೆ. ಹಾಗೆಯೇ ಎರಡು ಬದಿಯ ತಡೆಗೋಡೆಗಳ ಮೇಲೆ ಕಾಡು ಗಿಡಗಳು ಆವರಿಸಿ ಬೆಳೆಯುತ್ತಿವೆ. ಆದ್ದರಿಂದ ಈ ಸೇತುವೆಯ ಸ್ವಚ್ಛತೆ ಹಾಗೂ ಸುರಕ್ಷತೆಯತ್ತ ಎರಡೂ ಗ್ರಾಮ ಪಂಚಾಯಿತಿಗಳು ಗಮನ ಹರಿಸಬೇಕಾದ ಅನಿವಾರ್ಯತೆಯ ಬಗ್ಗೆ ಸ್ಥಳೀಯರಾದ ಆರ್.ಕೆ.ಮಾಸ್ಟರ್ ಕೃಷ್ಣ, ಮಹೇಶ್ ಶಿವಣ್ಣ, ಯಶವಂತ್ ನಾರಾಯಣ್ ಮೊದಲಾದವರ ಆಗ್ರಹವಾಗಿದೆ.

ಪುರಾತನ ಕಾಲದ ಮಾದರಿಯಲ್ಲಿರುವ ಈ ಹಳೆಯ ಸೇತುವೆಯನ್ನು ಹಾಗೆಯೇ ಉಳಿಸಿಕೊಳ್ಳುವತ್ತ ಲೋಕೋಪ ಯೋಗಿ ಇಲಾಖೆಯೂ ಕೂಡ ಗಮನಹರಿಸಬೇಕಿದೆ.