ಮಡಿಕೇರಿ, ಅ.೧೧: ಗೋಣಿಕೊಪ್ಪಲು, ಶ್ರೀಮಂಗಲ ಎಕ್ಸ್ಪ್ರೆಸ್, ನೆಲ್ಲಿಹುದಿಕೇರಿ, ಪಾಲಂಗಾಲ, ಕ್ಲಬ್ ಮಹೇಂದ್ರ ಮತ್ತು ಸೋಮೇಶ್ವರ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೧೨ ರಂದು (ಇಂದು) ಬೆಳಗ್ಗೆ ೯.೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಗೋಣಿಕೊಪ್ಪಲು ಟೌನ್, ಅರುವತ್ತೋಕ್ಲು, ಜೋಡುಬೀಟಿ, ಶ್ರೀಮಂಗಲ ಟೌನ್, ಟಿ.ಶೆಟ್ಟಿಗೇರಿ ಟೌನ್, ನೆಲ್ಲಿಹುದಿಕೇರಿ, ಒಂಟಿಯAಗಡಿ, ಭರಡಿ, ಪಾಲಂಗಾಲ, ಕೋಟೋಳಿ, ಚೀಟೋಡೆ, ಕಬ್ಲ್ಮಹೇಂದ್ರ, ಕದನೂರು ಕಾಲೋನಿ, ಸೋಮೇಶ್ವರ ದೇವಸ್ಥಾನ, ಹೌಸಿಂಗ್ ಬೋರ್ಡ್ ಕಾಲೋನಿ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಕೋರಿದ್ದಾರೆ.