ಮಡಿಕೇರಿ, ಅ. ೧೧: ಮಡಿಕೇರಿ ತಾಲೂಕಿನ ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ತಾ. ೧೩ರ ದುರ್ಗಾಷ್ಟಮಿಯಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ ಹಾಗೂ ೧೦ ಗಂಟೆಗೆ ದುರ್ಗಾಹವನವನ್ನು ಏರ್ಪಡಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಭಕ್ತಾದಿಗಳು ಕೈಜೋಡಿಸಿ ಮಾಡಿಸಿರುವ ಮಾಂಗಲ್ಯ ಸರವನ್ನು ಸಹ ಮಾತೆ ಶ್ರೀ ದುರ್ಗಾಭಗವತಿ ದೇವಿಗೆ ಅರ್ಪಿಸಲಾಗುವುದು. ಭಕ್ತಾದಿಗಳು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಶ್ರೀ ದೇವಿಯ ತೀರ್ಥ ಪ್ರಸಾದವನ್ನು ಸ್ವೀಕರಿಸಲು ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ಕೋರಿದೆ.