ಸೋಮವಾರಪೇಟೆ, ಅ. ೯: ರಾಜ್ಯ ಸರ್ಕಾರದಿಂದ ನೂತನವಾಗಿ ಜಾರಿಗೆ ತಂದಿರುವ ಅಮೃತ ಗ್ರಾಮ ಯೋಜನೆಯಡಿ ಲಭ್ಯವಾಗುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಕಾಮಗಾರಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸ ಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ತಾಲೂಕಿನ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಅಮೃತ ಗ್ರಾಮ ಯೋಜನೆಯಡಿ ರೂ. ೨೫ ಲಕ್ಷ ಅನುದಾನ ನೀಡುತ್ತಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಕ್ರಿಯಾಯೋಜನೆಯಂತೆ ಕೆಲಸಕಾರ್ಯಗಳು ನಡೆಯಬೇಕು. ತಪ್ಪಿದಲ್ಲಿ ಸಂಬAಧಪಟ್ಟವರನ್ನು ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಂಜನ್ ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸ ಬೇಕು. ಗ್ರಾಮದ ಸರ್ವಾಂಗೀಣ
ಅಭಿವೃದ್ಧಿಗೆ ಪಣತೊಡಬೇಕು. ಸ್ಥಳೀಯ ಸರ್ಕಾರವಾಗಿರುವ ಗ್ರಾ.ಪಂ.ಗಳು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಇದೇ ಸಂದರ್ಭ ದುಂಡಳ್ಳಿ ಗ್ರಾಮ ಪಂಚಾಯಿತಿಯನ್ನು ಅಮೃತ ಗ್ರಾಮ ಪಟ್ಟಿಗೆ ಸೇರ್ಪಡೆಗೊಳಿಸಿದ ಹಿನ್ನೆಲೆ ಗ್ರಾ.ಪಂ.ನಿAದ ಶಾಸಕರನ್ನು ಅಭಿನಂದಿಸಲಾಯಿತು. ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರಾದ ದೇವರಾಜು, ಕಾಂತರಾಜು, ಮನು, ಭಾಗ್ಯವತಿ, ಪ್ರಮುಖರಾದ ಭುವನೇಶ್ವರಿ, ಸವಿತ ಸತೀಶ್, ಮೋಕ್ಷಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.