ಭಾಗಮAಡಲ, ಅ. ೯: ಇಲ್ಲಿನ ಭಗಂಡೇಶ್ವರ ದೇವಾಲಯದ ಬಳಿ ಬಸ್ಸು ನಿಲ್ಲುವ ಸ್ಥಳದಲ್ಲಿ ರಸ್ತೆಯಂಚಿಗೆ ದೊಡ್ಡ ಹೊಂಡವಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ರಸ್ತೆಯ ಬದಿಯಲ್ಲಿ ಒಳಚರಂಡಿಯ ಪಕ್ಕ ಸುಮಾರು ಆರು ಅಡಿಗಳ ಹೊಂಡ ಮಳೆ ಬಂದಾಗ ನೀರು ತುಂಬಿಕೊAಡು ಅಪಾಯ ತಂದೊಡ್ಡಿದೆ. ಜಾತ್ರೆಯ ಸಂದರ್ಭ ಹಲವು ವಾಹನಗಳು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಗುಂಡಿಗೆಬಿದ್ದು ಅಪಾಯಕ್ಕೀಡಾಗುವ ಸಾಧ್ಯತೆ ಇದೆ. ಮಕ್ಕಳು ರಸ್ತೆಯಂಚಿನಲ್ಲಿ ನಡೆದಾಡುವ ಸಂದರ್ಭ ಅಪಾಯ ಎದುರಿಸುವ ಸಾಧ್ಯತೆಗಳಿವೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ಹೊಂಡವನ್ನು ಮುಚ್ಚಿ ಸಹಕರಿಸಬೇಕಿದೆ.
-ಸುನಿಲ್