ಮಡಿಕೇರಿ, ಅ.೯; ‘ದೂರದಿಂದ ನೋಡಿದರೆ ಕೋಲು ಕಡ್ಡಿಯಂತೆ ಕಾಣುವ., ದೇಹವೆಲ್ಲಾ ಹುಡುಕಿದರೂ ತಲೆಯ ಮೇಲಿನ ಕೂದಲು ಮಾತ್ರ ಎದ್ದು ಕಾಣುವ., ಆದರೆ., ಸದಾ ನಗುತಲಿರುವ ಈತನ ಎದುರು ಮ್ಯೂಸಿಕ್ ಆನ್ ಆಯಿತೆಂದರೆ ಸಾಕು., ಮೈಯ್ಯಲ್ಲಿ ಮೂಳೆಯೇ ಇಲ್ಲವೇನೋ ಎಂಬAತೆ ಈತನ ದೇಹ ಹೊರಳಾಡುತ್ತೆ., ಆಳೆತ್ತರಕ್ಕೆ ಹಾರಿ ಬೀಳುತ್ತೆ., ನೋಡುವವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಕೈ-ಕಾಲುಗಳು ಚಲಿಸುತ್ತವೆ.,’
ಇದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋದಲ್ಲಿ ಫೈನಲ್ ಪ್ರವೇಶಿಸಿರುವ ಕೊಡಗಿನ ನೃತ್ಯ ಪಟು ರಾಹುಲ್ ರಾವ್ ಅವರ ನೃತ್ಯದ ಪರಿ.., ಝೀ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಪ್ರಸಾರವಾಗುವ, ಜನಮನ್ನಣೆ ಗಳಿಸಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಅಂತಿಮ ಘಟ್ಟಕ್ಕೆ ತಲಪಿದ್ದು, ಕೊಡಗಿನ ನೃತ್ಯಪಟು ರಾಹುಲ್ ಎಸ್.ರಾವ್. ಜೋಡಿ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಅಲ್ಲದೆ, ರಿಯಾಲಿಟಿ ಶೋಗಳಲ್ಲಿ ಜಿಲ್ಲೆಯಿಂದ ಇದುವರೆಗೆÀ ಭಾಗವಹಿಸಿದ್ದ ಕಲಾವಿದರುಗಳ ಪೈಕಿ ಫೈನಲ್ಸ್ಗೆ ತಲಪಿದ ಪ್ರಥಮ ಕಲಾವಿದ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಡಿಕೆಡಿಗೆ ಆಯ್ಕೆಯಾದ ಬಳಿಕ ಒಟ್ಟು ೩೨ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿ ಇದೀಗ ಅಂತಿಮ ಸುತ್ತಿಗೆ ತಲಪಿರುವ ರಾಹುಲ್ ರಾವ್‌ಗೆ ಜೊತೆಯಾಗಿದ್ದು ಬೆಂಗಳೂರಿನ ಬೃಂದಾ ಪ್ರಭಾಕರ್. ಸ್ವತಃ ನೃತ್ಯಗುರು ಆಗಿರುವ ರಾಹುಲ್ ಬೆಂಗಳೂರಿನ ನೃತ್ಯ ಸಂಯೋಜಕ ರಾಹುಲ್ ಅವರೊಂದಿಗಿನ ಪಯಣದಲ್ಲಿ ಪ್ರತಿ ಸಂಚಿಕೆಯಲ್ಲೂ ಹೊಸತನದೊಂದಿಗೆ ತೀರ್ಪುಗಾರರ ಹಾಗೂ ಪ್ರೇಕ್ಷಕರ ಮನ ಗೆಲ್ಲುವದರೊಂದಿಗೆ ಸರಣಿಯಲ್ಲಿಯೇ ಪ್ರಥಮ ಫೈರ್ ಬ್ರಾಂಡ್ ಹಾಗೂ ಗೋಲ್ಡನ್ ಕ್ಯಾಪ್ ಪಡೆದು ನಂತರದಲ್ಲಿ ಅತಿ ಹೆಚ್ಚು, ಅಂದರೆ ಒಟ್ಟು ೨೫ ಫೈರ್ ಬ್ರಾಂಡ್ ಪಡೆದು ಗೋಲ್ಡನ್ ಜೋಡಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ರೋಬೋ ವಾಕ್ ನೃತ್ಯದ ಮೂಲಕ ಅದ್ಭುತ ಪ್ರದರ್ಶನಕ್ಕೆ ನಂತÀರದಲ್ಲಿ ರೋಬೋ ರಾಹುಲ್ ಎಂದೇ ಹೆಸರುವಾಸಿ.
ಅಷ್ಟೇ ಅಲ್ಲ., ಇದುವರೆಗಿನ ಡಿಕೆಡಿ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಪ್ರವೇಶವಿಲ್ಲದೆ ಅದ್ಭುತ ಪ್ರದರ್ಶನಕ್ಕಾಗಿ ನೇರವಾಗಿ ಕ್ವಾರ್ಟರ್ ಫೈನಲ್ಸ್ನಿಂದ ಫೈನಲ್ಸ್ಗೇರಿದ ಪ್ರಥಮ ಜೋಡಿ ಎಂಬ ಕೀರ್ತಿ ಕೂಡ ಇವರದ್ದಾಗಿದೆ. ಅಷ್ಟಾಗಿಯೂ ಔಪಚಾರಿಕವಾಗಿ ಭಾಗವಹಿಸಿದ್ದ ಸೆಮಿಫೈನಲ್ಸ್ನಲ್ಲಿಯೂ ಮಹಾವಿಷ್ಣುವಿನ ದಶಾವತಾರವನ್ನು ಅದ್ಭುತವಾಗಿ ಪ್ರದರ್ಶಿಸುವದರೊಂದಿಗೆ ಶಹಬ್ಭಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಇAದು ಫೈನಲ್
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಯ ಅಂತಿಮ ಸುತ್ತು ತಾ.೧೦ರಂದು ಇಂದು ಸಂಜೆ ೭ಗಂಟೆಗೆ ಪ್ರಸಾರವಾಗಲಿದೆ. ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಹಲವಾರು ಬಹುಮಾನದೊಂದಿಗೆ ಚಿನ್ನದ ಪದಕ ಪಡೆದಿರುವ ಕೊಡಗಿನ ನೃತ್ಯಪಟು ರಿಯಾಲಿಟಿ ಶೋನಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆಯುವದರೊಂದಿಗೆ ಪ್ರಥಮ ಸ್ಥಾನದತ್ತ ಮುಖ ಮಾಡಿರುವದು ಹೆಮ್ಮೆಯ ಸಂಗತಿ. ಮೂರ್ನಾಡು ನಿವಾಸಿ, ಅರ್ಚಕರು, ದೈಹಿಕ ಶಿಕ್ಷಕರಾಗಿರುವ ಶ್ರೀಪತಿ ರಾವ್, ಶಿಕ್ಷಕಿ ಕುಸುಮಾವತಿ ದಂಪತಿ ಯರ ಪುತ್ರನಾಗಿರುವ, ನೃತ್ಯಗುರು ವಿನೋದ್ ಕರ್ಕೆರಾ, ಮಹೇಶ್ ಅವರ ಗರಡಿಯಲ್ಲಿ ಪಳಗಿರುವ ರಾಹುಲ್‌ಗೆ ಶುಭ ಹಾರೈಸೋಣ.
-ಕುಡೆಕಲ್ ಸಂತೋಷ್