ಮಡಿಕೇರಿ, ಅ. ೯: ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಸಹಕಾರ ಸಂಘಗಳ/ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿಗೆ ಬಾಕಿ ಇರುವ ಅವಧಿ ಮುಗಿಯಲಿರುವ ಚುನಾವಣೆಗಳನ್ನು ನಡೆಸಲು ಅನುಮತಿಸಲಾಗಿದೆ ಎಂದು ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರದ ಆಯುಕ್ತರಾದ ಡಾ. ಎನ್.ಎಸ್. ಚನ್ನಪ್ಪಗೌಡ ಅವರು ನೂತನ ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ಚುನಾವಣೆಗಳನ್ನು ಮುಂದೂಡುವ ಪೂರ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಾವ ಹಂತದಲ್ಲಿ ನಿಲ್ಲಿಸಲಾಗಿತ್ತೋ ಆ ಹಂತದಿAದ ಪ್ರಾರಂಭಿಸಿ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮತ್ತು ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡು ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗದೆ ಆಡಳಿತಾಧಿಕಾರಿ, ವಿಶೇಷಾಧಿಕಾರಿಗಳು ನೇಮಕಗೊಂಡ ಹಾಗೂ ಆಡಳಿತ ಮಂಡಳಿಯ ಪದಾವಧಿಯು ಮುಕ್ತಾಯವಾಗುವ ಸಹಕಾರ ಸಂಘಗಳ ಚುನಾವಣೆಗಳನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, ನಿಯಮಗಳು ಮತ್ತು ಕರ್ನಾಟಕ ಸೌಹಾರ್ದ ಸಹಕಾರಿಗಳ ಅಧಿನಿಯಮ, ನಿಯಮಗಳ ಅನುಸಾರ ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ತಿಳಿಸಿದೆ.

ಚುನಾವಣೆಗಳನ್ನು ನಡೆಸುವಾಗ ಕೋವಿಡ್-೧೯ರ ನಿಯಂತ್ರಣಕ್ಕೆ ಸಂಬAಧಿಸಿದAತೆ ಮಾರ್ಗ ಸೂಚಿಗ ಳನ್ನು ತಪ್ಪದೆ ಪಾಲಿಸಿ ಸಹಕಾರ ಸಂಘಗಳ, ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಚುನಾವಣೆ, ಖಾಲಿ ಬಿದ್ದ ನಿರ್ದೇಶಕರ ಸ್ಥಾನಗಳ ಚುನಾವಣೆ ಮತ್ತು ಹೊಸದಾಗಿ ನೋಂದಣಿಯಾದ ಸಹಕಾರ ಸಂಘಗಳ, ಸೌಹಾರ್ದ ಸಹಕಾರಿಗಳ ಪ್ರಥಮ ಆಡಳಿತ ಮಂಡಳಿ ಚುನಾವಣೆ ಗಳನ್ನು ನಡೆಸಿ ಫಲಿತಾಂಶವನ್ನು ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಸಲ್ಲಿಸಲು ತಿಳಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.