ಗೋಣಿಕೊಪ್ಪ ವರದಿ, ಅ. ೯: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಬೆಳ್ಳಿ ಹಬ್ಬ ಕಾರ್ಯಕ್ರಮ ನಡೆಯಿತು.
ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಕರುಣೆ ಮಹತ್ವದ ಪಾತ್ರ ವಹಿಸುವುದರಿಂದ ಸ್ಪಂದಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳಿಂದ ಮತ್ತಷ್ಟು ಕೊಡುಗೆ ದೇಶಕ್ಕೆ ಸಿಗುವಂತಾಗಬೇಕು ಎಂದು ಶುಭ ಕೋರಿದರು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿಕ್ಷಣ ನಿರ್ದೇಶಕ ಡಾ. ಎಂ. ಹನುಮಂತಪ್ಪ ಮಾತನಾಡಿ, ಸಮಗ್ರ ಕೃಷಿ ಶಿಕ್ಷಣ ಪದ್ಧತಿಯಿಂದ ಅರಣ್ಯ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಗುತ್ತಿದೆ. ಅರಣ್ಯ ಶಿಕ್ಷಣ ಪಡೆದವರು ಬೇರೆ ಉದ್ಯೋಗ ನಿಭಾಯಿಸುವಷ್ಟು ಸಾಮರ್ಥ್ಯ ಹೊಂದಿರುವುದರಿAದ ಗುಣಮಟ್ಟದ ಅಧಿಕಾರಿಯಾಗಲು ಅರಣ್ಯ ಶಿಕ್ಷಣ ಪೂರಕವಾಗಿದೆ ಎಂದರು. ಇಂದಿನ ಮಕ್ಕಳಲ್ಲಿ ಸ್ಪರ್ಧಾತ್ಮಕ ಶಿಕ್ಷಣದ ಆಸಕ್ತಿ ಹೆಚ್ಚಾಗುತ್ತಿದ್ದು, ದೇಶಕ್ಕೆ ಲಾಭವಾಗುತ್ತಿದೆ. ಬದುಕು ನಿರ್ವಹಣೆ, ಅರಣ್ಯ ಸಂರಕ್ಷಣೆಗೂ ಸಹಕಾರಿ ಎಂದರು.
(ಮೊದಲ ಪುಟದಿಂದ) ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಬೋಧನೆ, ಸಂಶೋಧನೆ, ವಿಸ್ತರಣೆ ಚಿಂತನೆಯಲ್ಲಿ ಕಾಲೇಜು ಅಂತಾರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆಯಲು ಕಾಲ ಪಕ್ವವಾಗುತ್ತಿದೆ. ಹಿರಿಯರು ಪೋಷಿಸಿಕೊಂಡು ಬಂದ ಕಾಲೇಜು ಅರಣ್ಯ ಶಿಕ್ಷಣ ಪಡೆಯಲು ನೆರವಾಗುತ್ತಿದೆ. ಸಾಕಷ್ಟು ಅರಣ್ಯ ಅಧಿಕಾರಿಗಳು ಇಲ್ಲಿನ ಹಳೆಯ ವಿದ್ಯಾರ್ಥಿಗಳು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ಡಾ. ಜಿ. ಎಂ. ದೇವಗಿರಿ ಕಾಲೇಜು ನಡೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನಲ್ಲಿ ಕರ್ತವ್ಯ ಸಲ್ಲಿಸಿ, ನಿವೃತ್ತಿ ಪಡೆದ ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ, ಡಾ. ಸ್ವಾಮಿರಾವ್, ಡಾ. ನಂದಿನೆರವAಡ ಎ. ಪ್ರಕಾಶ್, ಡಾ. ಮುಕ್ಕಾಟೀರ ಎನ್. ರಮೇಶ್, ನರಸಿಂಹ, ಶಿವರುದ್ರಯ್ಯ, ಕೆ.ಎಂ. ರಾಮಕೃಷ್ಣ, ಸಂಧ್ಯಾ ಚಿದ್ವಿಲಾಸ್ ಸನ್ಮಾನ ಸ್ವೀಕರಿಸಿದರು. ನಿವೃತ್ತಿ ನಂತರ ಅಗಲಿದ ಸಿಬ್ಬಂದಿಗೆ ಸಂತಾಪ ಸೂಚಿಸಲಾಯಿತು.
ಕಾಲೇಜು ಅಲುಮ್ನೆöÊ ಅಸೋಸಿಯೇಷನ್ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಲ್ವರ್ ಜೂಬ್ಲಿ ಪ್ರಶಸ್ತಿ ಮತ್ತು ಶಾಂತಕುಮಾರಿ ಜ್ಞಾಪಕಾರ್ಥದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಕ್ಷಮಾ ಕೋಪರ್ಡೆಗೆ ನೀಡಲಾಯಿತು. ಕ್ಷಮಾ ಕೋಪರ್ಡೆ ಅವರ ಪಾಲಕರಾದ ಶಶಿಕಲಾ, ವೆಂಕಟೇಶ್ ಕೋಪರ್ಡೆ ಪ್ರಶಸ್ತಿ ಸ್ವೀಕರಿಸಿದರು.
ಮೊನಿಷಾ ಮತ್ತು ತಂಡ ನಾಡಗೀತೆ ಹಾಡಿದರು. ಡಾ. ರಾಮಕೃಷ್ಣ ಹೆಗಡೆ ಸ್ವಾಗತ, ಅನಂತ ಕೃಷ್ಣ ವಂದಿಸಿದರು. ಸುಪ್ರಿಯಾ ಸಾರಿಮಠ್, ರಶ್ಮಿಕಾ ನಿರೂಪಿಸಿದರು.