ಮಡಿಕೇರಿ, ಅ. ೮: ಸರಕಾರಿ ಕಚೇರಿಗೆ ತೆರಳಿ ಕಡತ ಹುಡುಕುವುದು ಎಂದರೆ, ಭೂಮಿಯಡಿ ನಿಧಿಗಾಗಿ ಹುಡುಕಾಡಿದಂತೆ ಎಂಬ ಮಾತಿದೆ. ರಾಶಿಗಟ್ಟಲೆ ದಾಖಲೆ ನಡುವೆ ಬೇಕಾದ ಕಡತ ಹುಡುಕುವುದೇ ಒಂದು ಸವಾಲಿನ ಕೆಲಸ. ಇದರಿಂದ ಜನರು ಕಚೇರಿಗೆ ಅಲೆದಾಡುತ್ತ. ಕಾಯುತ್ತ ಸುಸ್ತಾಗುತ್ತಾರೆ. ಇಂತಹ ಸಮಸ್ಯೆಗಳಿಗೆ ಮಡಿಕೇರಿ ನಗರಸಭೆ ಪರಿಹಾರ ಕಂಡುಕೊAಡಿದ್ದು, ಹಲವು ವರ್ಷಗಳಿಂದ ಇರುವ ಕಡತಗಳಿಗೆಲ್ಲ ಡಿಜಿಟಲ್ ಸ್ಪರ್ಶ ಸಿಗುತ್ತಿದೆ.

ಮಡಿಕೇರಿ ಪುರಸಭೆಯಾದಾಗಲಿಂದಲೂ ಇದುವರೆಗೂ ಇರುವ ಎಲ್ಲಾ ರೀತಿಯ ಕಡತಗಳನ್ನು ‘ಡಿಜಿಟಲೈಸ್ಡ್’ ಮಾಡುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ. ಈಗಾಗಲೇ ಈ ಸಂಬAಧ ಕಾರ್ಯಚಟುವಟಿಕೆ ಶುರುವಾಗಿದ್ದು, ವಿವಿಧ ರೀತಿಯ ೨೫ ನೋಂದಾವಣಿ ಪುಸ್ತಕಗಳನ್ನು ‘ಸ್ಕಾö್ಯನ್’ ಮಾಡಿ ‘ಡಿಜಿಟಲೈಸ್ಡ್’ ಮಾಡಲಾಗಿದೆ.

ಸಾವಿರಾರು ಕಡತ :ನಗರಸಭೆಯಲ್ಲಿ ಆಸ್ತಿ ನಿರ್ಧರಣ, ನೀರಿನ ತೆರಿಗೆ, ಕಂದಾಯ ನಮೂದಿಸುವ ಕೆ.ಎಂ.ಎಫ್. ೨೪, ಜಮಾಬಂದಿ, ಪೌತಿ ಖಾತೆ (ಮ್ಯೂಟೇಷನ್ ರಿಜಿಸ್ಟರ್), ಮಳಿಗೆಗಳ ನೋಂದಣಿ ಸೇರಿದಂತೆ ಇನ್ನಿತರ ಬಗೆಯ ಸಾವಿರಾರು ಕಡತಗಳು ‘ರೆಕಾರ್ಡ್ ರೂಂ’ನಲ್ಲಿವೆ.

ಈ ಹಿಂದೆ ಕೈಬರವಣಿಗೆ ಮೂಲಕ ಕಡತಗಳನ್ನು ಇಡಲಾಗುತಿತ್ತು. ಕಡತ ಬೇಕಾದವರಿಗೆ ಇದನ್ನು ಹುಡುಕಿಕೊಡುವುದು ಒಂದು ಕಷ್ಟದ ಕೆಲಸವಾಗಿತ್ತು. ದಾಖಲೆಗಳು ಬೇಕಾದಲ್ಲಿ ತಿಂಗಳುಗಟ್ಟಲೇ ಹುಡುಕಾಟದಲ್ಲಿ ಸಮಯ ಹೋಗುತಿತ್ತು. ಇದೀಗ ಲಕ್ಷಾಂತರ ಕಡತಗಳು ಡಿಜಿಟಲ್ ಆಗುತ್ತಿರುವುದರಿಂದ ಸುಲಭವಾಗಿ ಕಡತಗಳು ಸಿಗಲಿವೆ

‘ಡಿಜಿಟಲೈಸ್ಡ್’ ಪ್ರಗತಿಯಲ್ಲಿ

ಡಿಜಿಟಲೀಕರಣ ಪ್ರಗತಿಯಲ್ಲಿದ್ದು, ಇದುವರೆಗೂ ಕೆಲವು ದಾಖಲಾತಿಗಳನ್ನು ಸ್ಕಾö್ಯನ್ ಮಾಡಲಾಗಿದೆ. ಕಡತ ಸಂಬAಧಿಸಿದವರ ಹೆಸರು, ನೋಂದಣಿ ಸಂಖ್ಯೆ, ವಿಳಾಸ ಆಧಾರದಲ್ಲಿ ಕಡತವನ್ನು ಕಂಪ್ಯೂಟರ್ ಮೂಲಕ ಪತ್ತೆಹಚ್ಚಬಹುದಾಗಿದೆ.

ಈ ಕಾರ್ಯದಿಂದ ಕಡತ ಹುಡುಕಾಟ ಸುಲಭವಾಗಲಿದೆ. ಹಲವು ದಾಖಲೆಗಳು ಹಾಳಾಗಿದ್ದು, ಹಾಳೆಗಳು ಹರಿದಿವೆ. ಇದನ್ನು ಕೂಡ ಸರಿಪಡಿಸಿ ‘ಡಿಜಿಟಲೈಸ್ಡ್’ ಮಾಡುವ ಜವಾಬ್ದಾರಿ ನಗರಸಭೆ ಮೇಲಿದೆ. ಈ ಕೆಲಸವನ್ನು ಖಾಸಗಿಯವರಿಗೆ ವಹಿಸಿದ್ದು, ಅವರು ದಾಖಲೆಗಳನ್ನು ಸ್ಕಾö್ಯನ್ ಮಾಡಿ ವಿಂಗಡಿಸಿ ಅದನ್ನು ಗಣಕೀಕೃತ ಮಾಡುತ್ತಾರೆ. ಇದರಿಂದ ಮೂಲ ದಾಖಲೆಗಳ ಸಂರಕ್ಷಣೆಯಾಗುತ್ತವೆ. -ಹೆಚ್.ಜೆ. ರಾಕೇಶ್