ಮಡಿಕೇರಿ, ಅ. ೯: ಬ್ಯಾಡ್ಮಿಂಟಲ್ ವರ್ಲ್ಡ್ ಫೆಡರೇಷನ್ ವತಿಯಿಂದ ನವೆಂಬರ್ ೨೮ ರಿಂದ ಸ್ಪೇನ್ ನವೆಲ್ಯಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಪಂದ್ಯಾಟದ ೫೫+ ವಿಭಾಗದ ಆಟಗಾರ್ತಿಯಾಗಿ ಮಡಿಕೇರಿಯ ತಾತಪಂಡ ಜ್ಯೋತಿ ಸೋಮಯ್ಯ ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ಇದೀಗ ಎರಡನೆಯ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಿರುವ ಕೊಡಗಿನ ಆಟಗಾರ್ತಿಯಾಗಿದ್ದಾರೆ.

ನಗರದ ಜಿಮ್ ಮಾಸ್ಟರ್ ಚೆಪ್ಪುಡೀರ ಪ್ರದೀಪ್ ಪೂವಯ್ಯ ಅವರಿಂದ ದೈಹಿಕ ಶಿಕ್ಷಣ ಹಾಗೂ ಬ್ಯಾಡ್ಮಿಂಟನ್‌ನ ತರಬೇತಿ ಪಡೆಯುತ್ತಿರುವ ಇವರು ಮಡಿಕೇರಿಯ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿಯನ್ನೂ ನೀಡುತ್ತಿದ್ದಾರೆ.