ಕುಶಾಲನಗರ, ಅ. ೯: ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ವರ್ಗಾವಣೆ ಪ್ರಕ್ರಿಯೆಯನ್ನು ೧ತಿಂಗಳೊಳಗಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಲು ಆದೇಶ ಹೊರಡಿಸಿದ್ದರೂ ಜಿಲ್ಲೆಯ ಕುಶಾಲನಗರ ತಾಲೂಕು ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಕಂಡುಬAದಿದೆ.
ಹೊಸದಾಗಿ ರಚನೆಯಾದ ತಾಲೂಕುಗಳಿಗೆ ಭೂಕಂದಾಯ ಕಾಯಿದೆ ೧೯೬೪ರ ಕಲಂ ೯೪-ಂ, ೯೪- ಃ ಮತ್ತು ೯೪-ಂ(೪) ರಡಿ ಕ್ರಮವಾಗಿ ನಮೂನೆ ೫೦, ನಮೂನೆ ೫೩ ಮತ್ತು ನಮೂನೆ ೫೭ ರಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ವರ್ಗಾಯಿಸುವ ಕುರಿತು ಸರ್ಕಾರದಿಂದ ಸುತ್ತೋಲೆ ಹೊರಡಿಸಿದರೂ ಇನ್ನೂ ಕುಶಾಲನಗರ ಜನತೆ ಮಾತ್ರ ದಾಖಲೆಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಸೋಮವಾರಪೇಟೆ ತಾಲೂಕು ಕಚೇರಿಯಿಂದ ನೂತನ ತಾಲೂಕು ಕುಶಾಲನಗರಕ್ಕೆ ಅಂದಾಜು ಹತ್ತು ಸಾವಿರದ ೫೦೦ ದಾಖಲೆಗಳ ಕಡತಗಳು ವರ್ಗಾವಣೆ ಯಾಗಲಿದ್ದು ಕುಶಾಲನಗರ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ನೂತನ ಕುಶಾಲನಗರ ತಾಲೂಕಿನ ಹಳೆಯ ೨ ಹೋಬಳಿ ಕೇಂದ್ರಗಳಾದ ಕುಶಾಲನಗರ ಸುಂಟಿಕೊಪ್ಪ ವ್ಯಾಪ್ತಿಯ ಜನತೆ ತಮ್ಮ ಅಗತ್ಯವಿರುವ ದಾಖಲೆಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಕುಶಾಲನಗರ ನೂತನ ತಾಲೂಕು ಕಚೇರಿಗೆ ಮೈಸೂರು ರಸ್ತೆಯ ಆರ್‌ಎಂಸಿ ಕಟ್ಟಡದಲ್ಲಿ ಕಚೇರಿ ಉದ್ಘಾಟನೆ ನಡೆದು ತಿಂಗಳುಗಳು ಕಳೆದರೂ ಇನ್ನೂ ಕಚೇರಿಯ ಫಲಕ ಮಾತ್ರ ಅಲ್ಲಿ ಕಂಡುಬರುತ್ತಿದೆ. ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಾರಣ ತಹಶೀಲ್ದಾರ್ ಅವರನ್ನು ಕುಶಾಲನಗರ ನಾಡ ಕಚೇರಿಯಲ್ಲಿ ಸಂಪರ್ಕಿಸಬಹುದು ಎನ್ನುವ ಫಲಕ ಕಾಣಬಹುದು. ಇನ್ನು ಉಳಿದಂತೆ ತಾಲೂಕು ತಹಶೀಲ್ದಾರರು ಹೋಬಳಿ ಕಚೇರಿಯಲ್ಲಿ ಇರೋದು ಕಂಡು ಬಂದಿದ್ದು ಇದರಿಂದ ಹೋಬಳಿ ಕಚೇರಿಯ ಕೆಲಸ ಕಾರ್ಯಗಳಿಗೆ ಕೂಡ ತೊಡಕುಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.
ನೂತನ ತಾಲೂಕು ಕಚೇರಿಯ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಉಂಟಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಕಳೆದ ಕೆಲ ಸಮಯದಿಂದ ದಾಖಲೆಗಳಾಗಿ ದಾಖಲೆಗಳಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕ ಸಿ ವಿ ನಾಗೇಶ್ .ಈ ಬಗ್ಗೆ ಕ್ಷೇತ್ರದ ಶಾಸಕರು ಕೂಡಲೇ ಗಮನಹರಿಸಿ ನೂತನ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ಅವರು ಆಗ್ರಹಿಸಿದ್ದಾರೆ .
ಸೋಮವಾರಪೇಟೆ ತಾಲೂಕು ಕಚೇರಿಯಿಂದ ಕುಶಾಲನಗರ ನೂತನ ತಾಲೂಕಿಗೆ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ವರ್ಗಾಯಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು.
ಕುಶಾಲನಗರ ಹೋಬಳಿ ಕಚೇರಿಯಲ್ಲಿ ಜಾಗದ ಕೊರತೆ ಇರುವ ಕಾರಣ
(ಮೊದಲ ಪುಟದಿಂದ) ಸೋಮವಾರಪೇಟೆಯಿಂದ ದಾಖಲೆಗಳನ್ನ ಕಳುಹಿಸಲು ತೊಡಕುಂಟಾಗಿದೆ. ಈ ನಿಟ್ಟಿನಲ್ಲಿ ಕುಶಾಲನಗರ ತಹಶೀಲ್ದಾರ್ ಅವರು ಪತ್ರ ಬರೆದಿದ್ದು ತಮ್ಮಲ್ಲಿ ದಾಖಲೆಗಳನ್ನು ಇಡಲು ಅವಕಾಶ ಸ್ಥಳದ ಕೊರತೆಯಿದೆ ಎಂದು ತಿಳಿಸಿರುವುದಾಗಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ (ಮೊದಲ ಪುಟದಿಂದ) ಸೋಮವಾರಪೇಟೆಯಿಂದ ದಾಖಲೆಗಳನ್ನ ಕಳುಹಿಸಲು ತೊಡಕುಂಟಾಗಿದೆ. ಈ ನಿಟ್ಟಿನಲ್ಲಿ ಕುಶಾಲನಗರ ತಹಶೀಲ್ದಾರ್ ಅವರು ಪತ್ರ ಬರೆದಿದ್ದು ತಮ್ಮಲ್ಲಿ ದಾಖಲೆಗಳನ್ನು ಇಡಲು ಅವಕಾಶ ಸ್ಥಳದ ಕೊರತೆಯಿದೆ ಎಂದು ತಿಳಿಸಿರುವುದಾಗಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೀಡಿದ್ದಾರೆ. ಈ ನಡುವೆ ನೂತನ ತಾಲೂಕು ರಚನೆಯ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ನೂತನ ಜಾಗಗಳು, ಆಸ್ತಿಗಳ ನೋಂದಣಿ ಕಾರ್ಯ ಕೂಡ ಸ್ಥಗಿತಗೊಂಡಿದೆ. ಆರ್ ಟಿಸಿ ದಾಖಲೆಯನ್ನು ಮಾತ್ರ ಇದೀಗ ಕುಶಾಲನಗರ ಹೊರತಾಗಿ ಬೇರೆ ಯಾವುದೇ ಕೇಂದ್ರಗಳಲ್ಲಿ ಕೂಡ ಪಡೆಯಬಹುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ ನೂತನ ತಾಲೂಕಿನ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಕಾರ್ಯಯೋಜನೆ ರೂಪಿಸಬೇಕಾಗಿದೆ ಎನ್ನುವುದು ನಾಗರಿಕರ ಆಗ್ರಹವಾಗಿದೆ. ನೂತನ ತಾಲೂಕಿನ ಪ್ರಕ್ರಿಯೆಗಳು ನವೆಂಬರ್ ೪ ರ ಒಳಗಾಗಿ ಪೂರ್ಣಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸುವಂತೆ ಆದೇಶ ಬಂದಿದ್ದರೂ, ಕುಶಾಲನಗರ ತಾಲೂಕು ಕಚೇರಿಯ ಅಧಿಕಾರಿಗಳು ಮಾತ್ರ ಇದರಲ್ಲಿ ವಿಫಲರಾಗುವುದು ಕಂಡುಬAದಿದೆ. ಒಟ್ಟಾರೆ ಕುಶಾಲನಗರ ನೂತನ ತಾಲೂಕು ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಕೂಡಲೇ ಕುಶಾಲನಗರ ತಾಲೂಕು ಕಚೇರಿಯನ್ನು ಕಂದಾಯ ಸಚಿವರಿಂದ ಉದ್ಘಾಟನೆ ಗೊಂಡಿರುವ ಆರ್‌ಎಂಸಿ ಕಟ್ಟಡಕ್ಕೆ ಸ್ಥಳಾಂತರಿಸಿ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಇರುವ ಕುಶಾಲನಗರ ವ್ಯಾಪ್ತಿಯ ಕಡತಗಳನ್ನು ವರ್ಗಾಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.