ಶ್ರೀಮAಗಲ, ಅ. ೯: ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪನೆ ಕುರಿತಂತೆ ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ನಡೆಸುತ್ತಿರುವ ಹೋರಾಟಕ್ಕೆ ಪೊನ್ನಂಪೇಟೆ ಕೊಡವ ಸಮಾಜ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ ಘೋಷಿಸಿದ್ದಾರೆ.
ಕೊಡವರಿಗೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಹೋರಾಟ ನಡೆಸುತ್ತಿರುವ ಯುಕೋ ಸಂಘಟನೆ, ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಇತ್ತೀಚೆಗೆ, ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯನ್ನು ಭೇಟಿಯಾಗಿ ಈ ವಿಷಯದ ಕುರಿತು ಮಾತುಕತೆ ನಡೆಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಈ ಸಭೆಯ ನಂತರ ಮಾತನಾಡಿದ ರಾಜೀವ್ ಬೋಪಯ್ಯ, ಬೇಡಿಕೆ ಮುಂದಿಟ್ಟಿರುವುದು ಸಮಯೋಚಿತ ನಿರ್ಧಾರವಾಗಿದ್ದು, ಕ್ಷೀಣಿಸುತ್ತಿರುವ ಕೊಡವಾಮೆಯನ್ನು ಸಧೃಡಗೊಳಿಸಲು, ಇದು ಸಕಾಲವಾಗಿದೆ. ಕೊಡವ ಜನಾಂಗದ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನ ಶೂನ್ಯವಾಗಿದೆ. ಅಭಿವೃದ್ಧಿ ನಿಗಮ ಸ್ಥಾಪನೆಯಾದರೆ ಕೊಡವ ಜನಾಂಗ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಇತ್ತೀಚೆಗೆ, ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯನ್ನು ಭೇಟಿಯಾಗಿ ಈ ವಿಷಯದ ಕುರಿತು ಮಾತುಕತೆ ನಡೆಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಈ ಸಭೆಯ ನಂತರ ಮಾತನಾಡಿದ ರಾಜೀವ್ ಬೋಪಯ್ಯ, ಬೇಡಿಕೆ ಮುಂದಿಟ್ಟಿರುವುದು ಸಮಯೋಚಿತ ನಿರ್ಧಾರವಾಗಿದ್ದು, ಕ್ಷೀಣಿಸುತ್ತಿರುವ ಕೊಡವಾಮೆಯನ್ನು ಸಧೃಡಗೊಳಿಸಲು, ಇದು ಸಕಾಲವಾಗಿದೆ. ಕೊಡವ ಜನಾಂಗದ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನ ಶೂನ್ಯವಾಗಿದೆ. ಅಭಿವೃದ್ಧಿ ನಿಗಮ ಸ್ಥಾಪನೆಯಾದರೆ ಕೊಡವ ಜನಾಂಗ ತಿಳಿಸಿದರು.
ಸಭೆಯಲ್ಲಿ, ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಜಾಂಜಿ ಮೂಕಳೇರ ಲಕ್ಷ್ಮಣ, ನಿರ್ದೇಶಕರಾದ, ಮಲ್ಲಮಾಡ ಪ್ರಭು ಪೂಣಚ್ಚ, ಚೆಪ್ಪುಡಿರ ರಾಕೇಶ್ ದೇವಯ್ಯ, ಬೋಪಣ್ಣ, ರೂಪ ಉತ್ತಪ್ಪ, ಮಂಡೆಚAಡ ದಿನೇಶ್ ಚಿಟ್ಯಪ್ಪ, ಮೂಕಳಮಾಡ ಅರಸು, ಅಡ್ಡಂಡ ಸುನಿಲ್ ಹಾಗೂ ಯುಕೊ ಸದಸ್ಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಉಪಸ್ಥಿತರಿದ್ದರು.