ವೀರಾಜಪೇಟೆ, ಅ. ೯: ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತಾಲೂಕು ಸಂಘಟನೆಗಳಿAದ ನಗರದ ಗಡಿಯಾರ ಕಂಬದ ಬಳಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್‌ನ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ ಮಾತನಾಡಿ, ಕಾಶ್ಮೀರದಲ್ಲಿ ಭಯೋತ್ಪಾದÀಕರು ಸಂಚು ರೂಪಿಸಿ ಹಿಂದೂಗಳನ್ನು ಮತ್ತು ಅಮಾಯಕ ರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿರುವುದು ಖಂಡನೀಯ. ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆ ಗಳು ಮಾಡಿರುವ ದೌರ್ಜನ್ಯಗಳಂತೆ ಭಾರತದಲ್ಲೂ ಭಯದ ವಾತಾವರಣ ಸೃಷ್ಟಿ ಮಾಡುವ ಹುನ್ನಾರಗಳು ನಡೆಯುತ್ತಿವೆ. ಕಾಶ್ಮೀರ ಪಂಡಿತರನ್ನು ಭಾರತದಿಂದ ತೊಲಗಿಸಿ ಕಾಶ್ಮೀರವನ್ನು ಇಸ್ಲಾಮೀಕರಣ ಮಾಡುವತ್ತ ಉಗ್ರ ಸಂಘಟನೆಗಳು ಸಾಗಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮುಕ್ತಗೊಳಿಸಿದ ನಂತರ ಇತ್ತೀಚಿನ ದಿನಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಘಟನೆಗೆ ರಾಜಕೀಯ ಪ್ರೇರಿತ ವ್ಯಕ್ತಿಗಳ ಕೈವಾಡವು ಇದೆ. ಉಗ್ರರ ಅಟ್ಟಹಾಸವವನ್ನು ಧಮನಮಾಡುವಂತೆ ಮತ್ತು ಕಾಶ್ಮೀರದಲ್ಲಿರುವ ನಿವಾಸಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ಎಲ್ಲಾ ಭಾಗಗಳಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಪ್ರಮುಖರಾದ ಕಂಠಿ ಕಾರ್ಯಪ್ಪ ಮಾತನಾಡಿ, ಕಾಶ್ಮೀರದಲ್ಲಿ ಉಗ್ರವಾದ ಸಂಘಟನೆಗಳು ಪೊಲೀಸರು ಮತ್ತು ರಕ್ಷಣಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದರು. ಇದೀಗ ಅಮಾಯಕ ನಡೆಸಲಾಗುತ್ತಿದೆ. ಘಟನೆಗೆ ರಾಜಕೀಯ ಪ್ರೇರಿತ ವ್ಯಕ್ತಿಗಳ ಕೈವಾಡವು ಇದೆ. ಉಗ್ರರ ಅಟ್ಟಹಾಸವವನ್ನು ಧಮನಮಾಡುವಂತೆ ಮತ್ತು ಕಾಶ್ಮೀರದಲ್ಲಿರುವ ನಿವಾಸಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ಎಲ್ಲಾ ಭಾಗಗಳಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಪ್ರಮುಖರಾದ ಕಂಠಿ ಕಾರ್ಯಪ್ಪ ಮಾತನಾಡಿ, ಕಾಶ್ಮೀರದಲ್ಲಿ ಉಗ್ರವಾದ ಸಂಘಟನೆಗಳು ಪೊಲೀಸರು ಮತ್ತು ರಕ್ಷಣಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದರು. ಇದೀಗ ಅಮಾಯಕ ಆಗ್ರಹಿಸಿದರು.

ಜಿಲ್ಲಾ ದುರ್ಗಾವಾಹಿನಿ ಪ್ರಮುಖರಾದ ಅಂಬಿಕ ಉತ್ತಪ್ಪ ಮಾತನಾಡಿದರು. ವಿಶ್ವ ಹಿಂದೂ ಪರಿಷತ್‌ನ ತಾಲೂಕು ಕಾರ್ಯದÀರ್ಶಿ ಬಿ.ಎಂ. ಕುಮಾರ್, ಭಜರಂಗದಳ ತಾಲೂಕು ಸಂಚಾಲಕ್ ವಿವೇಕ್ ರೈ, ಗೋರಕ್ಷಕ್ ಪ್ರಮುಖ್ ಸಜನ್, ನಗರ ಸಂಚಾಲಕ್ ನಿತಿನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಜೂನಾ ಸುನಿತ, ಆಶಾ ಸುಬ್ಬಯ್ಯ ಹಾಗೂ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ