ಮಡಿಕೇರಿ, ಅ. ೯: ನಗರದ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು, ಅದನ್ನು ಉಲ್ಲಂಘಿಸಿ ಕೆಲವು ಪ್ರವಾಸಿಗಳು ಗದ್ದುಗೆಗೆ ತೆರಳಿದ ಘಟನೆ ನಡೆದಿದೆ.

ಈ ಸಂಬAಧ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದು, ಗದ್ದುಗೆಯ ಕಾವಲುಗಾರ ನನಗೆ ತಿಳಿದಿಲ್ಲ. ಮೇಲಾಧಿಕಾರಿ ಕಳುಹಿಸಿದ್ದಾರೆ. ಅವರನ್ನು ಕೇಳಿ ಎಂದು ವೀಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಹೇಳಿದ್ದಾರೆ.

ಅಧಿಕಾರಿಗಳೇ ಆದೇಶ ಗಾಳಿಗೆ ತೂರಿ ತಮಗೆ ಬೇಕಾದವರಿಗೆ ಪ್ರವಾಸಿ ತಾಣಕ್ಕೆ ಪ್ರವೇಶ ನೀಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.