ಮಡಿಕೇರಿ, ಅ. ೭: ತಾ. ೭ ರಂದು ಸಂಜೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ತಾ ೮ ರಂದು (ಇಂದು) ರಬೀಉಲ್ ಅವ್ವಲ್ ಮೊದಲ ದಿನವಾಗಿದ್ದು, ತಾ. ೧೯ ರಂದು ಮೀಲಾದುನ್ನಬಿ (ಈದ್ ಮಿಲಾದ್) ಆಚರಿಸಲಾಗುವುದು ಎಂದು ಕೊಡಗು ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಸುಲ್ತಾನುಲ್ ಉಲಮಾ ಕಾಂತಪುರA ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಪ್ರತಿನಿಧಿ ಕಾಂತಪುರA ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.