ಚೆಟ್ಟಳ್ಳಿ, ಅ. ೭: ಸಹಕಾರ ಸಂಘದಲ್ಲಿ ಅತಿಥಿಗೃಹ ನಡೆಸಲು ಅನುಮತಿ ನೀಡದ ಚೆಟ್ಟಳ್ಳಿ ಪಂಚಾಯಿತಿ ವಿರುದ್ಧ ಹಾಗೂ ತಡೆ ಒಡ್ಡುತ್ತಿರುವ ಪಂಚಾಯಿತಿ ಸದಸ್ಯರ ವಿರುದ್ಧ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿವರ್ಗ ದವರು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಸಹಕಾರ ಸಂಘದ ಕಚೇರಿಯನ್ನು ಮುಚ್ಚುವ ಮೂಲಕ ಕಚೇರಿಯಿಂದ ಚೆಟ್ಟಳ್ಳಿ ಪಂಚಾಯಿತಿಯವರೆಗೆ ಪ್ರತಿಭಟನೆ ನಡೆಸಿ ಅತಿಥಿಗೃಹಕ್ಕೆ ಅನುಮತಿ ನೀಡದ ಗ್ರಾ.ಪಂ. ಹಾಗೂ ಅನುಮತಿಗಾಗಿ ತಡೆ ಒಡ್ಡುತ್ತಿರುವ ಕೆಲವು ಪಂಚಾಯಿತಿ ಸದಸ್ಯರ ಕಾರ್ಯ ವೈಖರಿಯ ವಿರುದ್ಧ ಧಿಕ್ಕಾರ ಕೂಗಿದರು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್‌ಕುಮಾರ್ ಮಾತನಾಡಿ, ಕೆಲವೊಂದು ಗೊಂದಲಗಳಿAದ ಅನುಮತಿ ನೀಡಲಾಗಿಲ್ಲ; ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿ ಅನುಮತಿ ನೀಡುತ್ತೇವೆ ಪ್ರತಿಭಟನೆಯನ್ನು ಹಿಂಪಡೆಯುವAತೆ ಮನವಿ ಮಾಡಿದರು.
ಪಂಚಾಯಿತಿ ಸದಸ್ಯನಿಂದಲೇ ಹೋರಾಟ...
ಸಹಕಾರ ಸಂಘದ ಪುಣ್ಯಕೋಟಿ ಭವನದಲ್ಲಿರುವ ಅತಿಥಿಗೃಹ ನಡೆಸಲು ಅನುಮತಿ ನೀಡದ ಬಗ್ಗೆ ಸಹಕಾರ ಸಂಘ ಪ್ರತಿಭಟಿಸುತ್ತಿದ್ದಾಗ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಪ್ರತಿಭಟನೆಗೆ ಸಾಥ್ ನೀಡಿದರು. ಇಂದು ಪ್ರತಿಭಟನೆ ನಡೆಯುತ್ತದೆ ಎಂದು ತಿಳಿದಿದ್ದರೂ ಪಂಚಾಯಿತಿ ಅಧ್ಯಕ್ಷರ ಪತ್ತೆ ಇಲ್ಲ. ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ ನಡೆದು ಅಧ್ಯಕ್ಷರೇ ಸಭೆಯ ಮಧ್ಯೆ ಎದ್ದು ಹೋಗಿರುವ ಘಟನೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಇಂತಹ ಪಂಚಾಯಿತಿಯಲ್ಲಿ ನಾವಿರುವುದು ಬೇಸರವೆನಿಸಿದೆ ಎಂದರು.
ಈ ಸಂದರ್ಭ ಗ್ರಾ.ಪಂ. ಸದಸ್ಯೆ ಮಾಲಾಶ್ರೀ, ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ನಿರ್ದೇಶಕರಾದ ಮರದಾಳು ಎಸ್. ಉಲ್ಲಾಸ, ಪೇರಿಯನ ಪೂಣಚ್ಚ, ಬಿ.ಎಂ. ಕಾಶಿ, ಬಟ್ಟೀರ ಕೆ. ಅಪ್ಪಣ್ಣ, ಪುತ್ತರಿರ ಪಿ. ನಂಜಪ್ಪ, ಧನಂಜಯ ಟಿ.ಎಸ್, ಸಹಕಾರ ಸಂಘದ ಸಿಬ್ಬಂದಿಗಳು ಭಾಗವಹಿಸಿದ್ದರು. ಚೆಟ್ಟಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ಶ್ರೀನಿವಾಸ್, ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.