ಮಡಿಕೇರಿ, ಅ. ೮: ಭಾರತೀಯ ಸೇನಾಪಡೆಯ ದಂತ ವೈದ್ಯಕೀಯ ವಿಭಾಗದ ಕ್ಯಾಪ್ಟನ್ ಆಗಿ ಮುಂಜಾAದಿರ ಸೋಮಣ್ಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಗ್ರೂಪ್ ಕ್ಯಾಪ್ಟನ್ ಮುಂಜಾAದಿರ ವಿವೇಕ್ ತಿಮ್ಮಯ್ಯ ಹಾಗೂ ಪುನೀತ ಕಾರ್ಯಪ್ಪ (ತವರುಮನೆ: ಬಯವಂಡ) ಇವರ ಪುತ್ರ. ಭಾರತೀಯ ಸೇನೆಯ ವೈದ್ಯಕೀಯ ವಿಭಾಗದ ೨೦೨೧ರ ಆಯ್ಕೆ ಪ್ರಕ್ರಿಯೆಯಲ್ಲಿ ಕ್ಯಾಪ್ಟನ್ ಸೋಮಣ್ಣ ರಾಷ್ಟçಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿರುತ್ತಾರೆ. ಇವರು ದಂತ ವೈದ್ಯಕೀಯದ ಸ್ನಾತಕೋತ್ತರ ಪ್ರವೇಶಿಸಲು ಬರೆದ Pಉಓಇಇಖಿ (ಒಆS) ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ೨೩ನೇಯ ರ್ಯಾಂಕ್ ಹಾಗೂ ಂIIಒS(ಒಆS) ಪರೀಕ್ಷೆಯಲ್ಲೂ ೨೯ನೇ ರ್ಯಾಂಕನ್ನು ೨೦೨೧ರಲ್ಲಿ ಪಡೆದಿರುತ್ತಾರೆ.
ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಆರ್.ವಿ. ಕಾಲೇಜಿನಲ್ಲಿ ತಮ್ಮ ದಂತ ವೈದ್ಯಕೀಯ ಪದವಿಯನ್ನು ೨೦೨೦ರಲ್ಲಿ ಪೂರೈಸಿರುವ ಇವರು ಬೆಂಗಳೂರಿನ ಕುಮಾರ ಸ್ಕೂಲ್ನಲ್ಲಿ ತಮ್ಮ ವ್ಯಾಸಂಗವನ್ನು ಮುಗಿಸಿರುತ್ತಾರೆ.
ಪ್ರಸ್ತುತ ಹರಿಯಾಣದ ಹಿಸ್ಸಾರ್ನಲ್ಲಿ ಕ್ಯಾಪ್ಟನ್ ಸೋಮಣ್ಣ ಕರ್ತವ್ಯ ನಿರ್ವಹಿಸುತ್ತಿದ್ದಾರೆ.