ಮಡಿಕೇರಿ, ಅ. ೮: ವಲಸಿಗ ಕಾರ್ಮಿಕರ ಮೂಲದ ಸತ್ಯಾಸತ್ಯತೆ ಬಗ್ಗೆ ತನಿಖೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದೆಂದು ಶಾಸಕ ಬೋಪಯ್ಯ ಹೇಳಿದ್ದಾರೆ. ಅಸ್ಸಾಮಿಗರೆಂದು ಹೇಳಿಕೊಂಡು ಟಿ-ಶೆಟ್ಟಿಗೇರಿಯಲ್ಲಿ ತೋಟದ ಕೆಲಸ ಮಾಡುತ್ತಾ ತೋಟದ ಮನೆಯಲ್ಲಿ ವಾಸವಾಗಿದ್ದ ವಲಸಿಗರು ಇಂದು ತೋಟದ ಮಾಲೀಕರ ಮನೆಯ ಮೇಲೆಯೇ ದಾಳಿ ನಡೆಸಿದ ಘಟನೆ ನನ್ನ ಗಮನಕ್ಕೆ ಬಂದಿದೆ, ಕಡಿಮೆ ವೇತನ ನೀಡಲಾಗುತ್ತಿದೆ ಎಂಬ ನೆಪದಲ್ಲಿ ಮಾಲೀಕರ ಮನೆಯ ಮೇಲೆಯೇ ದಾಳಿ ನಡೆಸಿ ಎಲ್ಲಾ ವಲಸಿಗರು ನಾಪತ್ತೆಯಾಗಿದ್ದಾರೆ. ಇದು ಖಂಡನೀಯವೆAದು ಅವರು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಶಾಸಕರು ಕಡಿಮೆ ವೇತನದ ಕಾರಣಕ್ಕೆ ತೋಟದಲ್ಲಿ ವಲಸಿಗರನ್ನು ಸೇರಿಸಿಕೊಂಡಲ್ಲಿ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕೊಡಗಿನ ನಿವಾಸಿಗಳಾದ ನಮಗೆ ಹಾಗೂ ಎಲ್ಲಾ ತೋಟದ ಮಾಲೀಕರಿಗೂ ಈ ಘಟನೆಯೊಂದು ಪಾಠವೂ ಹೌದು.

ಯಾವುದೇ ಸ್ಥಳೀಯ ಕಾರ್ಮಿಕರಿಂದ ಈವರೆಗೂ ಮಾಲೀಕರ, ಮಾಲೀಕರ ಮನೆಯ, ಮಾಲೀಕರ ಕುಟುಂಬಸ್ಥರ ಮೇಲಾಗಲೀ ದಾಳಿ ನಡೆದ ಉದಾಹರಣೆಯೇ ಇರಲಿಲ್ಲ; ಆದರೆ ಈ ಘಟನೆಯಿಂದ ಅಸ್ಸಾಮಿಗರ ಹೆಸರಿನಲ್ಲಿರುವ ವಲಸಿಗರಿಂದ ಮಾಲೀಕರು ಸೇರಿದಂತೆ ನಮ್ಮ ಎಲ್ಲಾ ಕೊಡಗಿನವರಿಗೆ ಭದ್ರತೆಯ ವಿಷಯದಲ್ಲಿ ಭವಿಷ್ಯದಲ್ಲಿ ಅಪಾಯವಿದೆ ಎಂಬAತೆ ಭಾಸವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶೀಘ್ರವೇ ಗೃಹ ಸಚಿವರನ್ನು ಭೇಟಿಯಾಗಿ ವಲಸಿಗರ ಮೂಲದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

ಸಂಬAಧಪಟ್ಟ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸೂಕ್ತ ಕಠಿಣ ಕ್ರಮವನ್ನೂ ಕೈಗೊಳ್ಳಲಾಗುವುದು.

ಹಾಗೆಯೇ ಓಲೈಕೆ ರಾಜಕಾರಣ ಮಾಡುವವರು ಮೂಲ ನಿವಾಸಿಗಳ, ಹಾಗೂ ದೇಶದ ಭದ್ರತೆಯ ಬಗ್ಗೆ ಗಮನವಹಿಸಿ ವಲಸಿಗರ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದ್ದಾರೆ.