ನ್ಯಾಯಾಧೀಶರಾಗಿ ಪೂಣಚ್ಚ
ಮಡಿಕೇರಿ, ಅ. ೮: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಕೊಡಗಿನವರಾದ ಚೆಪ್ಪುಡೀರ ಎಂ. ಪೂಣಚ್ಚ (ನಯನ್) ಅವರನ್ನು ನೇಮಕ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಶಿಫಾರಸ್ಸು ಮಾಡಿ ಸೂಚಕವನ್ನು ಹೊರಡಿಸಿದೆ. ಈ ಬಗ್ಗೆ ಕೇಂದ್ರ ಸರಕಾರವು ಶೀಘ್ರವೇ ನೇಮಕ ಆದೇಶ ಹೊರಡಿಸುವ ನಿರೀಕ್ಷೆ ಇದೆ.
ಇವರು ಮೂಲತಃ ತಿತಿಮತಿ ಸನಿಹದ ನೊಕ್ಯ ಸಿದ್ದಾಪುರ ಗ್ರಾಮದವರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ಸುಮಾರು ೨೦ ವರ್ಷಗಳಿಂದ ಬೆಂಗಳೂರಿನಲ್ಲಿ ‘ಲೆಕ್ಸ್ ಫ್ಲೆಕ್ಸಸ್’ ಹೆಸರಿನ ವಕೀಲಿ ಸಂಸ್ಥೆಯ ಸಂಸ್ಥಾಪಕರಾಗಿದ್ದು ಹಲವಾರು ಯುವ ವಕೀಲರಿಗೆ ವೃತ್ತಿ ತರಬೇತಿ ನೀಡಿದ್ದಾರೆ.
ಇವರು ಕಳೆದ ಹಲವು ವರ್ಷದಿಂದ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚುವರಿ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿ ಸರಕಾರದ ಮತ್ತು ನ್ಯಾಯಾಧೀಶರ ಮೆಚ್ಚುಗೆಗೆ ಪಾತ್ರರಾಗಿದ್ದರು.
(ಮೊದಲ ಪುಟದಿಂದ) ಕಳೆದ ಡಿಸೆಂಬರ್‌ನಲ್ಲಿ ಇವರ ಹೆಸರನ್ನು ಈ ಹುದ್ದೆಗೆ ಶಿಫಾರಸ್ಸು ಮಾಡಲಾಗಿದ್ದು ಇದೀಗ ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ. ಸದ್ಯದಲ್ಲಿ ಕೇಂದ್ರದಿAದ ಅಧಿಕೃತ ಪ್ರಕಟಣೆ ಬರುವ ನಿರೀಕ್ಷೆಯಿದೆ.
ಪೂಣಚ್ಚ ಅವರು ಚೆಪ್ಪುಡೀರ ದಿ. ವಕೀಲ ಮೊಣ್ಣಪ್ಪ ಹಾಗೂ ಶೈಲಾ (ತಾಮನೆ ಕಂಡ್ರತAಡ) ಅವರ ಪುತ್ರರಾಗಿದ್ದಾರೆ. ಇವರ ಪತ್ನಿ ಸವಿತಾ (ತಾಮನೆ ಕಂಜಿತAಡ) ಕೂಡ ವಕೀಲರಾಗಿದ್ದು, ಮಕ್ಕಳು ಹಿತಾ ಮತ್ತು ಸೋಮಯ್ಯ ಶಿಕ್ಷಣ ಪಡೆಯುತ್ತಿದ್ದಾರೆ. ಪೂಣಚ್ಚ ಅವರು ೨೩ ವರ್ಷದಿಂದ ವಕೀಲ ವೃತ್ತಿಯಲ್ಲಿದ್ದು ಕಳೆದ ಆಗಸ್ಟ್ ೨೦೨೦ ರಿಂದ ರಾಜ್ಯ ಉಚ್ಚ ನ್ಯಾಯಾಲಯ ದಲ್ಲಿ ಹೆಚ್ಚುವರಿ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.