ಸೋಮವಾರಪೇಟೆ, ಅ. ೭: ಇಲ್ಲಿನ ಬ್ರಾಹ್ಮಣ ಸಮಾಜದ ವತಿಯಿಂದ ಸ್ಥಳೀಯ ಶ್ರೀ ಸೋಮೇಶ್ವರ ದೇವಾಲಯದ ಶ್ರೀಶಕ್ತಿ ಪಾರ್ವತಿ ಸನ್ನಿದಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸಮಾಜದ ಮುಖಂಡರಾದ ರತನ್ ಪದ್ಮನಾಭ ಅವರ ನಿವಾಸದಿಂದ ದೇವಿ ವಿಗ್ರಹವನ್ನು ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕ ಚಿತ್ರ ಕುಮಾರ್ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಸುದರ್ಶನ್ ಕೌಶಿಕ್, ರಾಜೇಶ್ ಪದ್ಮನಾಭ, ರವಿಶಂಕರ್, ಯಡೂರು ಹರೀಶ್, ಎ.ಪಿ. ಲೋಕೇಶ್, ಮಧುಸೂದನ್, ಶ್ರೀಕಾಂತ್, ಎಸ್. ಆರ್. ಸೋಮೇಶ್, ಶ್ಯಾಮ್ ಸುಂದರ್, ಜಯಂತ್, ವಿದ್ಯಾ ಸೋಮೇಶ್, ಲಕ್ಷ್ಮಿ ಶ್ರೀನಿವಾಸ್, ಪ್ರೇಮ ಶ್ರೀಧರ್, ಎಲ್.ಎಮ್. ಪ್ರೇಮ, ಅರ್ಚನಾ ಶ್ರೀಕಾಂತ್, ಕೃಷ್ಣಪ್ಪ, ಲಕ್ಷ್ಮಿಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.