ಕುಶಾಲನಗರ, ಅ. ೭: ಮೈಸೂರಿನಲ್ಲಿ ನಡೆದ ಕಾರು ಅಪಘಾತ ದಲ್ಲಿ ಕುಶಾಲನಗರ ಮೂಲದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ಕಾರು ಚಾಲಕನ ನಿಯಂತ್ರಣ ಕಳೆದುಕೊಂq ಕಾರಣ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೈಸೂರಿನ ದಟ್ಟಗಳ್ಳಿ ಕನಕದಾಸ ನಗರದಲ್ಲಿ ನೆಲೆಸಿದ್ದ ಜಗದೀಶ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರ ಪತ್ನಿ ಗುಣ ಲಕ್ಷ್ಮಿ (೩೫) ಮತ್ತು ಪುತ್ರ ದೈವಿಕ್ (೧೨) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು.
ಮೈಸೂರಿನ ಬೋಗಾದಿ ಬಳಿ ಇರುವ ರಾಜರಾಜೇಶ್ವರಿ ನಗರದ ಬಳಿ ಬುಧವಾರ ಮುಂಜಾನೆ ಈ ಘಟನೆ ಸಂಭವಿಸಿದೆ.
ಮೂಲತಃ ಕುಶಾಲನಗರದ ನಿವಾಸಿ ಆಗಿರುವ ಮಾಜಿ ಸೈನಿಕ ಜಗದೀಶ್ ತಮ್ಮ ಕಾರಿನಲ್ಲಿ ಪತ್ನಿ ಮತ್ತು ಪುತ್ರನೊಂದಿಗೆ ಕುಶಾಲನಗರ ದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಮುಂಜಾನೆ ಈ ಘಟನೆ ಸಂಭವಿಸಿದೆ. ಕುಶಾಲನಗರ ಆದಿಶಂಕರಾಚಾರ್ಯ ಬಡಾವಣೆ ಯಲ್ಲಿರುವ ತಮ್ಮ ತಂದೆಯ ಮನೆಗೆ ಪಿತೃಪಕ್ಷ ಕಾರ್ಯಕ್ಕೆ ಆಗಮಿಸಿ ಹಿಂತಿರುಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಎದುರುಗಡೆ ಕುಳಿತಿದ್ದ ಪತ್ನಿ ಗುಣ ಲಕ್ಷಿö್ಮ ಹಾಗೂ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಪುತ್ರ ದೈವಿಕ್ ಅಪಘಾತದಲ್ಲಿ ತೀವ್ರ ಗಾಯ ಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಅಂತ್ಯಕ್ರಿಯೆ ಮೈಸೂರಿನಲ್ಲಿ ನೆರವೇರಿದೆ. ಕಾರು ಚಾಲನೆ ಮಾಡುತ್ತಿದ್ದ ಜಗದೀಶ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಗಾಗಿದ್ದರೆಂದು ತಿಳಿದುಬಂದಿದೆ.