ಮಡಿಕೇರಿ, ಅ. ೮ : ಹಾರಂಗಿ, ಅಬ್ಬೂರುಕಟ್ಟೆ, ಅಂಕನಹಳ್ಳಿ, ಕೊಡ್ಲಿಪೇಟೆ ಮತ್ತು ಕೋಟೆ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೧೦ ರಂದು ಬೆಳಿಗ್ಗೆ ೯.೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಹಾರಂಗಿ, ಕಾಜೂರು, ಅಬ್ಬೂರುಕಟ್ಟೆ, ಅಂಕನಹಳ್ಳಿ, ಸೀಗೆಹೊಸೂರು, ಮರೂರು, ಕ್ಯಾತನಳ್ಳಿ, ಕೊಡ್ಲಿಪೇಟೆ, ಅವರೆದಾಳು, ಬ್ಯಾಡಗೊಟ್ಟ, ಇಂಡಸ್ಟಿçಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಯಾಂಡ್, ಕಾಲೇಜು ರಸ್ತೆ, ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಕೋರಿದ್ದಾರೆ.