ಮಡಿಕೇರಿ, ಅ. ೮: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರ ಕಚೇರಿಗಳ ಎದುರು ಪ್ರತಿಭಟನೆಗಳನ್ನು ನಡೆಸಲು ಸಂಬAಧಿಸಿದ ಹಿರಿಯ ಅಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆಯಬೇಕಿದೆ. ಕಚೇರಿ ಎದುರಿನಲ್ಲಿ ಪ್ರತಿಭಟನೆಗೆ ಅನುಮತಿಯನ್ನು ಮೊದಲೇ ಪಡೆದುಕೊಂಡಿದ್ದಲ್ಲಿ ಮಾತ್ರ ಪೊಲೀಸ್ ಇಲಾಖೆ ಅವಕಾಶ ನೀಡಲಿದೆ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಬಳಿ ಕೇವಲ ೫೦ ಮಂದಿ ಮಾತ್ರ ತೆರಳಿ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆ - ಸಮಸ್ಯೆಗಳ ಕುರಿತಾಗಿ ಮನವಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಇತರ ಕಚೇರಿಗಳಿಗೂ ಇದು ಅನ್ವಯವಾಗಲಿದೆ.

ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ನ ಪ್ರಕಾರ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಈ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಈ ನಿರ್ದೇಶನದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಸಂಬAಧಿಸಿದ ಪೊಲೀಸ್ ಠಾಣೆಗೆ ಈ ಬಗ್ಗೆ ಸೂಚನೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ.

ಪ್ರಸ್ತುತ ಕೋವಿಡ್ - ೧೯ರ ಕಾರಣದಿಂದಾಗಿ ಪ್ರತಿಭಟನೆಗಳಲ್ಲಿ ಜನಸೇರುವದನ್ನು ನಿರ್ಬಂಧಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಕೊರೊನಾ ಪ್ರಥಮ ಅಲೆ ಸಂದರ್ಭ ಪೊಲೀಸ್ ಇಲಾಖೆ ಅನುಮತಿ ಕೋರುವವರಿಗೆ ಮುಚ್ಚಳಿಕೆ ಮೂಲಕ ಅವಕಾಶ ನೀಡುತ್ತಿತ್ತು. ಆದರೆ ಎರಡನೇ ಅಲೆ ಸಮಸ್ಯೆ (ಮೊದಲ ಪುಟದಿಂದ) ಗಂಭೀರವಾದ ಬಳಿಕ ಸಂಬAಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳ ಅನುಮತಿ ಪಡೆದುಕೊಂಡಲ್ಲಿ ಮಾತ್ರ ಅವಕಾಶ ನೀಡಲು ಸೂಚನೆ ಇದೆ. ಅಲ್ಲದೆ ಪ್ರತಿಭಟನೆಗಳ ಸಂದರ್ಭ ಇದರ ನಿಯಮ ಮೀರಿದಲ್ಲಿ ಎಫ್‌ಐಆರ್ ದಾಖಲಿಸಲು ಕೂಡ ಸೂಚನೆಯನ್ನು ನೀಡಲಾಗಿದೆ. ಇದರಂತೆ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿದೆ. ತಾ. ೧೧ ರಂದು ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‌ನಿಂದ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವುದರಲ್ಲಿ ಇದೇ ಕಾರಣವಿದೆ. ಅವರು ಈ ಬಗ್ಗೆ ಜಿಲ್ಲಾಡಳಿತದ ಪ್ರಮುಖರಿಂದ ಅನುಮತಿ ಹೊಂದಿದ್ದರೆ ಮಾತ್ರ ಅವಕಾಶವಿದ್ದು, ಪೊಲೀಸ್ ಇಲಾಖೆ ರಕ್ಷಣೆ ಹಾಗೂ ಬಂದೋಬಸ್ತ್ ಮಾತ್ರ ಕಲ್ಪಿಸಲಿರುವದಾಗಿ ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮ ಅವರು ಈ ಬಗ್ಗೆ ಪತ್ರಿಕೆ ಮಾಹಿತಿ ಬಯಸಿದಾಗ ಸ್ಪಷ್ಟೀಕರಿಸಿದ್ದಾರೆ.

‘ಶಕ್ತಿ’ಗೆ ಲಭ್ಯವಾದ ಮಾಹಿತಿಯಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತಲಿನ ೧೦೦ ಮೀಟರ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವದೇ ಪ್ರತಿಭಟನೆ ನಡೆಸುವಂತಿಲ್ಲ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗಳಿಗೆ ಕಡಿವಾಣ