ಮಡಿಕೇರಿ, ಅ. ೬: ಲಾರಿ ಮಾಲೀಕರ ಹಾಗೂ ಚಾಲಕರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಲಾರಿ ಸಂಚಾರವನ್ನು ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ಮಾಡಲು ಕೊಡಗು ಜಿಲ್ಲಾ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಗರದ ಪಾಪ್ಯುಲರ್ ಹೊಟೇಲ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಶೂದ್ ಮಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಶೂದ್ ಮಹಮದ್, ಕಳೆದ ತಿಂಗಳ ತಾ. ೨೯ ರಂದು ಸಂಘದ ಸಭೆ ನಡೆಸಿ ನಮ್ಮ ಬೇಡಿಕೆಗಳ ಬಗ್ಗೆ ಸಂಬAಧಿಸಿದವರಿಗೆ ಮನವಿ ಸಲ್ಲಿಸಿ ಏಳು ದಿನಗಳ ಗಡುವು ನೀಡಲಾಗಿತ್ತು. ಆದರೆ ಯಾವುದೇ ಸ್ಪಂದನ ಸಿಗದ ಕಾರಣ ಇಂದು ಮತ್ತೊಮ್ಮೆ ಆಡಳಿತ ಮಂಡಳಿಯ ತುರ್ತು ಸಭೆ ನಡೆಸಲಾಗಿದೆ ಎಂದರು.
ಕ್ರಷರ್‌ಗಳಿAದ ನಮಗೆ ಪರ್ಮಿಟ್ ಸಿಗುವಂತಾಗಬೇಕು. ಆ ಮೂಲಕ ಲಾರಿಗಳ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು. ಅಲ್ಲದೆ ಕ್ರಷರ್‌ಗಳಲ್ಲಿ ಏಕಾಏಕಿ ಸಾಮಗ್ರಿಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ ಲಾರಿ ಮಾಲೀಕರ - ಚಾಲಕರ ಸಂಘದ ಗಮನಕ್ಕೆ ತಂದು ಬೆಲೆ ಏರಿಕೆ ಮಾಡುವಂತಾಗಬೇಕು. ಇವು ನಮ್ಮ ಬೇಡಿಕೆಯಾಗಿದ್ದು, ಈ ಸಂಬAಧ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು. ಐದು ದಿನಗಳ ಒಳಗಾಗಿ ಸ್ಪಂದನ ಸಿಗದಿದ್ದರೆ ಕೊಡಗು ಜಿಲ್ಲೆಯಾದ್ಯಂತ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಮಶೂದ್ ಮಹಮದ್ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.