ಮಡಿಕೇರಿ, ಅ. ೬ : ಕೊಡಗು ಜಿಲ್ಲೆಯಲ್ಲಿ ಹಿಂದುತ್ವದ ಆಧಾರದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನನಗೆ ಹಿಂದೂ ಸಮಾಜದ ಸಾಮರಸ್ಯದ ಬಗ್ಗೆ ಜಿ.ಪಂ ಮಾಜಿ ಸದಸ್ಯ ಪಿ.ಎಂ.ರಾಜೀವ್ ಹಾಗೂ ಗ್ರಾ.ಪಂ ಸದಸ್ಯ ಕಾಳನ ರವಿ ಪಾಠ ಮಾಡುವ ಅಗತ್ಯವಿಲ್ಲವೆಂದು ಬಿಜೆಪಿ ಯುವ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಚೊಟ್ಟೆಕಮಾಡ ರಾಜೀವ್ ಬೋಪಯ್ಯ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಮಾರು ೩೮೦೦ ಸದಸ್ಯರಿರುವ ಕೊಡವ ಸಮಾಜದ ಅಧ್ಯಕ್ಷನಾಗಿ ತಲಕಾವೇರಿ ಕ್ಷೇತ್ರದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಕೊಡವರ ಪರವಾಗಿ ಹೇಳಿಕೆ ನೀಡುವುದು ನನ್ನ ಜವಾಬ್ದಾರಿಯಾಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ನಾನು ಸಾಮರಸ್ಯ ಕದಡುತ್ತಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿರುವುದು ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡವರನ್ನು ಬುಡಕಟ್ಟು ಜನಾಂಗವೆAದು ಘೋಷಿಸಬೇಕೆನ್ನುವ ಹೋರಾಟಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ. ಅಲ್ಲದೆ ಈ ಹೋರಾಟಕ್ಕೆ ಬೆಂಬಲ ಸೂಚಿಸಬೇಡಿ ಎಂದು ಹಿರಿಯ ವಕೀಲ ಸುಬ್ರಮಣ್ಯನ್ ಸ್ವಾಮಿ ಅವರ ಮೇಲೆ ಪ್ರಭಾವ ಬೀರಿದ್ದಾರೆ. ಸಿಎನ್ಸಿ ಹೋರಾಟಕ್ಕೆ ಸಂಬAಧಿಸಿದAತೆ ಡಾ. ದ್ವಾರಕನಾಥ್ ನಿಯೋಗ ವರದಿ ಮಾಡಲೆಂದು ಜಿಲ್ಲೆಗೆ ಬಂದಾಗ ಜನಪ್ರತಿನಿಧಿಯೊಬ್ಬರು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದಾಗ ಸಾಮರಸ್ಯದ ಮಾತುಗಳು ಎಲ್ಲಿ ಅಡಗಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಮೋರ್ಚಾದ ಅಧ್ಯಕ್ಷನಾಗಿ ಕಾಳನ ರವಿ ಅವರು ಮಾಡಿದ ಸಾಧನೆ ಎಂದರೆ ಭಾಗಮಂಡಲ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತೆ ನೋಡಿಕೊಂಡರು ಎಂದು ಟೀಕಿಸಿದ್ದಾರೆ.
ಕೊಡವ ಜನಾಂಗದ ಧಾರ್ಮಿಕ ಹಕ್ಕುಗಳ ಬಗ್ಗೆ ನಾನು ಮಾತನಾಡಿದ್ದೇನೆಯೇ ಹೊರತು ಇತರರ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಿಲ್ಲ. ಸಾಮರಸ್ಯದ ಬಗ್ಗೆ ಪಾಠ ಮಾಡುವವರು ಇತರ ಜನಾಂಗದ ಆಚಾರ, ವಿಚಾರ, ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕೃತಿಯನ್ನೂ ಗೌರವಿಸುವ ಕಾರ್ಯ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.