ಮಡಿಕೇರಿ, ಅ. ೬: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗೆ ವಿವರಿಸಿದ ಷರತ್ತುಗಳೊಂದಿಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಬೇಕು. ಸರ್ಕಾರೇತರ ಸಂಸ್ಥೆಗಳು ನಿಗದಿತ ದಾಖಲೆಗಳೊಂದಿಗೆ ತಾ. ೮ ರೊಳಗೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ ಮೊದಲನೆ ಮಹಡಿ ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಮಡಿಕೇರಿ ಕೊಡಗು ಜಿಲ್ಲೆ, ಇವರಿಗೆ ತಲುಪುವಂತೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅಪೂರ್ಣ ಅರ್ಜಿ ಮತ್ತು ತದನಂತರ ಸ್ವೀಕೃತವಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ಸರ್ಕಾರೇತರ ಸಂಘ ಸಂಸ್ಥೆಗಳ ಅರ್ಹತೆಗಳು
ಸಂಸ್ಥೆಯು ಸಕ್ಷಮ ನೋಂದಣಾಧಿಕಾರಿಗಳಲ್ಲಿ ನೋಂದಣಿ ಹೊಂದಿರಬೇಕು ಮತ್ತು ಕನಿಷ್ಟ ೩ ವರ್ಷಗಳ ಅವಧಿಯಾಗಿರಬೇಕು. ಕಾಲ ಕಾಲಕ್ಕೆ ನವೀಕರಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಹಿಂದೆ ಇಂತಹ ಯಾವುದಾದರು ಸಮೀಕ್ಷೆ ನಡೆಸಿದ ಅನುಭವ ಹೊಂದಿದ್ದಲ್ಲಿ, ಅನುಭವ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ದತ್ತಾಂಶ ಸಂಗ್ರಹಿಸಿ, ವಿಶ್ಲೇಷಿಸಿ ಸಾಫ್ಟ್ ಹಾಗೂ ಹಾರ್ಡ್ ಕಾಪಿ ಪ್ರತಿಯನ್ನು ಒದಗಿಸಬೇಕು. ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ರವರೆಗೆ ಮಾಡುವುದು. ಆಯ್ಕೆಯಾಗುವ ಸರ್ಕಾರೇತರ ಸಂಸ್ಥೆಯ ಸಮೀಕ್ಷೆದಾರರಿಗೆ ತರಬೇತಿ ನೀಡಲಾಗುವುದು. ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಆದೇಶ ನೀಡಿದ ೧೫ ದಿನಗಳಲ್ಲಿ ಪೂರ್ಣಗೊಳಿಸಬೇಕು. ಜಿಲ್ಲಾ/ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಥೆಗಳಿಗೆ ಭೇಟಿ ನೀಡಿ ನಮೂನೆಯನ್ನು ಭರ್ತಿ ಮಾಡುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಆದಿವಾಸಿಗಳು/ ಅಲ್ಪಸಂಖ್ಯಾತ ಪ್ರದೇಶಗಳನ್ನು ಗುರುತಿಸಿ, ಭೇಟಿ ಮಾಡಿ ನಮೂನೆಯನ್ನು ಭರ್ತಿಮಾಡುವುದು. ಸಮೀಕ್ಷೆ ಮಾಡಿದ ಮಾಹಿತಿಯು ಶೇ. ೧೦ಕ್ಕಿಂತ ಹೆಚ್ಚು ತಪ್ಪು ಎಂದು ಕಂಡುಬAದಲ್ಲಿ ಅಂತಹ ಸರ್ಕಾರೇತರ ಸಂಸ್ಥೆಗೆ ಹಣ ಪಾವತಿ ಮಾಡುವುದಿಲ್ಲ.
ಹೆಚ್ಚಿನ ಮಾಹಿತಿಯನ್ನು ಕೆಳಕಂಡ ಕಾರ್ಯಾಲಯದಿಂದ ಪಡೆಯಬಹುದಾಗಿದೆ
ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ, ಮಡಿಕೇರಿ.