ಸುಂಟಿಕೊಪ್ಪ, ಅ. ೬: ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ದಿನವನ್ನು ಆಚರಿಸಲಾಯಿತು.
ಪಟ್ಟಣ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಪ್ರಶಾಂತ್ ಬಿ.ಕೆ. ಹಾಗೂ ವಾಸುದೇವ್ ಅಧ್ಯಕ್ಷತೆಯಲ್ಲಿ ರಾಮ ಮಂದಿರದಲ್ಲಿ ಆಯೋಜಿಸಲಾಯಿತು.
ಸಭೆಯಲ್ಲಿ ಪಂಡಿತ್ ದೀನದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನೂ ಮಾಡಲಾಯಿತು ಹಾಗೂ ಆ ದಿನದ ಮಹತ್ವದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು ಹಾಗೂ ಪ್ರತಿಜ್ಞಾವಿಧಿ ಸಮರ್ಪಣೆಯ ಅಭಿಯಾನವನ್ನು ಮಾಡಲಾಯಿತು.
ಈ ಅಭಿಯಾನದಲ್ಲಿ ಜಿಲ್ಲಾ ಓಬಿಸಿ ಉಪಾಧ್ಯಕ್ಷರಾದ ಬಿ.ಕೆ. ಮೋಹನ್ ಹಾಗೂ ತಾಲೂಕು ಓಬಿಸಿ ಪ್ರಧಾನ ಕಾರ್ಯದರ್ಶಿಯಾದ ಸುನಿಲ್‌ಕುಮಾರ್ ಪಂಚಾಯಿತಿ ಸದಸ್ಯರಾದ ಮಂಜುಳಾ, ವಸಂತಿ, ಸೋಮನಾಥ್ ಹಾಗೂ ಪರಿಶಿಷ್ಟ ಮೋರ್ಚಾದ ಅಧ್ಯಕ್ಷ ಆನಂದ್ ಹಾಗೂ ಯುವ ಮೋರ್ಚಾ ಸದಸ್ಯರಾದ ಕನಿಷ್ ಹಾಗೂ ಶಕ್ತಿ ಕೇಂದ್ರದ ಓಬಿಸಿ ಅಧ್ಯಕ್ಷರಾದ ಸುನಿಲ್ ಈಶ್ವರ ಸಾಬು ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.