ಸೋಮವಾರಪೇಟೆ, ಅ. ೬: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಗ್ರಾಮಸ್ಥರೇ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸೋಮವಾರಪೇಟೆ ಪಟ್ಟಣದಿಂದ ಹಾನಗಲ್ಲು ಮೂಲಕ ತಲ್ತರೆಶೆಟ್ಟಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಅಡ್ಡಲಾಗಿ ನಿನ್ನೆ ರಾತ್ರಿ ಭಾರೀ ಗಾತ್ರದ ಮರ ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿತ್ತು.
ಮರವನ್ನು ತೆರವುಗೊಳಿಸಲು ಇಲಾಖಾ ಸಿಬ್ಬಂದಿಗಳಿಗಾಗಿ ಕಾಯದೇ ಸ್ವತಃ ಗ್ರಾಮಸ್ಥರೇ ಸೇರಿಕೊಂಡು ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಲ್ತರೆಶೆಟ್ಟಳ್ಳಿ ಗ್ರಾಮದ ಚೆಟ್ಟಳ್ಳಿ ಗ್ರೂಪ್‌ನ ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು.