ಮಡಿಕೇರಿ, ಅ.೬: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ.ರವಿ ಹಾಗೂ ಖಜಾಂಚಿಯಾಗಿ ಪ್ರಭುರೈ ಆಯ್ಕೆಯಾಗಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಬಿ.ವೈ.ಆನಂದ ರಘು, ಬಿ.ಶಿವಪ್ಪ, ಬಿ.ಡಿ.ನಾರಾಯಣ ರೈ, ಕೆ.ಜೆ.ರಾಮಕೃಷ್ಣ, ವಿಜಯಲಕ್ಷಿö್ಮÃ ರವಿಶೆಟ್ಟಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಎಂ.ಜಿ.ಹರೀಶ್ ಆಳ್ವ, ಕೆ.ಆರ್. ಬಾಲಕೃಷ್ಣ ರೈ, ಗೌರವ ಅಧ್ಯಕ್ಷರಾಗಿ ಶೇಖರ್ ಭಂಡಾರಿ, ಸಲಹೆಗಾರರಾಗಿ ಶ್ರೀಧರ್ ನೆಲ್ಲಿತ್ತಾಯ, ಜಿಲ್ಲಾ ಕಾರ್ಯದರ್ಶಿಯಾಗಿ ಸತೀಶ್ ಕುಂದರ್ ಹಾಗೂ ಬಿ.ಎಸ್.ಆನಂದ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಪಿ.ರಾಜೀವ್ ಲೋಚನ ನೇಮಕಗೊಂಡರು.
ಸದಸ್ಯರುಗಳನ್ನಾಗಿ ಸಂದ್ಯಾ ಗಣೇಶ್ ರೈ, ಲೀಲಾ ಶೇಷಮ್ಮ, ಗೌತಮ್ ಶಿವಪ್ಪ, ಬಿ.ಕೆ.ಮೋಹನ್, ಬಿ.ಎಸ್.ಪುರುಷೋತ್ತಮ್, ಎಂ.ಡಿ.ನಾಣಯ್ಯ, ಬಿ.ಎಸ್.ಜಯಪ್ಪ, ಅಶೋಕ್ ಆಚಾರ್ಯ, ಸುಜಾತ ಚಂದ್ರಶೇಖರ್, ಕಲಾವತಿ ಪೂವಪ್ಪ, ಪ್ರಕಾಶ್ ಆಚಾರ್ಯ, ಎಸ್.ಎನ್.ರಘು ಅವರುಗಳನ್ನು ಆಯ್ಕೆ ಮಾಡಲಾಯಿತು.