ಮಡಿಕೇರಿ, ಅ.೬: ಕರ್ನಾಟಕ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಡಿಕೇರಿಯ ಅಂಬೆಕಲ್ ಜೀವನ್ ಕುಶಾಲಪ್ಪ ಪುನರಾಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಂಘದ ೬೩ ನೇ ವಾರ್ಷಿಕ ಮಹಾಸಭೆಯಲ್ಲಿ ೨೦೨೧-೨೦೨೪ ನೇ ಅವಧಿಗೆ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಬೆಂಗಳೂರಿನ ರಘುನಾಥ ರೆಡ್ಡಿ ಮತ್ತು ಕಾರ್ಯದರ್ಶಿಯಾಗಿ ಮಡಿಕೇರಿಯ ಸಪ್ತಗಿರಿ ಎಂಟರ್‌ಪ್ರೆöÊಸಸ್ ಮಾಲೀಕ ಅಂಬೆಕಲ್ ಜೀವನ್ ಕುಶಾಲಪ್ಪ ಆಯ್ಕೆಯಾಗಿದ್ದಾರೆ.

ಬೀದರ್‌ನ ಶಿವರಾಜ ಪಾಟೀಲ್, ಬಳ್ಳಾರಿಯ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ, ಬೆಂಗಳೂರಿನ ಭಾನು ಪ್ರಕಾಶ್ ಜಂಟಿ ಕಾರ್ಯದರ್ಶಿಯಾಗಿ, ಕೋಲಾರದ ಉಮೇಶ್ ಖಚಾಂಚಿಯಾಗಿ, ಬಾಗಲಕೋಟೆಯ ಬಂಡು ಕಟ್ಟಿ ಸಂಘಟನಾ ಕಾರ್ಯದರ್ಶಿಯಾಗಿ ಮಹಾಸಭೆಯಲ್ಲಿ ಆಯ್ಕೆಯಾದರು.

ಇದೇ ಸಂದರ್ಭ ನೂತನ ಆಡಳಿತ ಮಂಡಳಿಗೆ ಕೊಡಗಿನಿಂದ ಮಡಿಕೇರಿಯ ವಿನೋದ್ ಮೆಡಿಕಲ್ಸ್ನ ಎ.ಕೆ. ವಿನೋದ್, ಗಣೇಶ್ ಮೆಡಿಕಲ್ಸ್ನ ಪುರುಷೋತ್ತಮ್, ವೈಭವ್ ಮೆಡಿಕಲ್ಸ್ನ ಕೆ.ವಸಂತ್‌ಕುಮಾರ್, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯAನ ಮೆರ್ವಿನ್ ಫೆರ್ನಾಂಡೀಸ್ ರಾಜ್ಯ ನಿರ್ದೇಶಕರು ಗಳಾಗಿ ಪುನರ್ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಔಷಧಿ ವ್ಯಾಪಾರಸ್ಥರ ಸಂಘದ ಪ್ರಕಟಣೆ ತಿಳಿಸಿದೆ.