ಗೋಣಿಕೊಪ್ಪಲು, ಅ.೭: ಗೋಣಿಕೊಪ್ಪಲುವಿನ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ೪೩ನೇ ವರ್ಷದ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಗೋಣಿಕೊಪ್ಪಲುವಿನ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ ನಡೆಯಿತು. ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡುತ್ತ ಕಳೆದ ಎರಡು ವರ್ಷ ಕೋವಿಡ್ ಮಹಾಮಾರಿ ಯಿಂದ ಸರಳ ದಸರಾಕ್ಕೆ ಒತ್ತು ನೀಡಲಾಗಿತ್ತು. ಈ ಬಾರಿಯೂ ದೇವಿಯ ಆರಾಧನೆಯೊಂದಿಗೆ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಂದೆ ಕೊರೊನಾ ಮಹಾಮಾರಿಯು ಇಲ್ಲದಂತಾಗಲು ದೇವಿಯು ಶಕ್ತಿ ನೀಡಲಿ ಎಂದರು.
ಮುAಜಾನೆಯಿAದಲೇ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಗೆ ಪೂಜಾ ಕೈಂಕರ್ಯಗಳು ಆರಂಭಗೊAಡವು. ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಮುಂದಾಳತ್ವದಲ್ಲಿ ಸಮಿತಿಯ ಪದಾಧಿಕಾರಿಗಳಾದ ಬಿ.ಎನ್. ಪ್ರಕಾಶ್, ಕೆ.ಪಿ.ಬೋಪಣ್ಣ, ಕೆ.ರಾಜೇಶ್, ಸುಮಿಸುಬ್ಬಯ್ಯ, ಜಪ್ಪು, ಡಾ.ಶಿವಪ್ಪ, ಗುಮ್ಮಟ್ಟೀರ ಕಿಲನ್ ಗಣಪತಿ, ಬಾಲಕೃಷ್ಣ ರೈ, ಕಾಡ್ಯಮಾಡ ಗಿರೀಶ್ ಗಣಪತಿ,
(ಮೊದಲ ಪುಟದಿಂದ) ದಶಮಂಟಪ ಸಮಿತಿಯ ಅಧ್ಯಕ್ಷ ಕಾಡ್ಯಮಾಡ ಚೇತನ್, ಮಂಜುರೈ, ಕರ್ಣರಾಜ್, ಮುಂತಾದವರು ಜವಾಬ್ದಾರಿ ನಿರ್ವಹಣೆ ಮಾಡಿದರು.
ಕೇಶವ್‌ಕಾಮತ್ ಹಾಗೂ ಕುಟುಂಬಸ್ಥರು ದೇವಿಯ ಪ್ರಾಯೋಜಕರಾಗಿದ್ದರು. ೯ ದಿನಗಳ ಕಾಲ ಸರಳ ರೀತಿಯಲ್ಲಿ ದೇವಿಯ ಆರಾಧನೆ ನಡೆಯಲಿದ್ದು ನವರಾತ್ರಿಯಂದು ದೇವಿಯ ವಿಸರ್ಜನೋತ್ಸವ ನಡೆಯಲಿದೆ. ಚಾಮುಂಡೇಶ್ವರಿಯ ಪ್ರತಿಷ್ಠೆಯ ನಂತರ ಹಿರಿಯ ನಾಗರಿಕ ಡಾ.ಶಿವಪ್ಪ ಭಜನಾ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್, ಗ್ರಾ.ಪಂ. ಅಧ್ಯಕ್ಷರಾದ ಚೈತ್ರ, ಸದಸ್ಯರಾದ ಗೀತಾ, ಚೇತನ್, ಸೌಮ್ಯಬಾಲು, ಮಲ್ಚೀರ ಗಾಂಧಿ ದೇವಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ರಾಜಶೇಖರ್, ಜ್ಯೋತಿ, ಪಂಚಾಯಿತಿ ಸಿಬ್ಬಂದಿ ಗಳಾದ ಸತೀಶ್, ರಾಜು, ಸುಬ್ರಮಣಿ, ಮುಂತಾದವರು ಉಪಸ್ಥಿತರಿದ್ದರು.