ಕಣಿವೆ, ಅ. ೬: ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ಕೈಯಿಂದ ಹಣವನ್ನು ವಿನಿಯೋಗಿಸಿ ಶಾಲೆಗೆ ಅಗತ್ಯವಿದ್ದ ಶೌಚಾಲಯವೊಂದನ್ನು ಕಟ್ಟಿಸಿ ಶಾಲೆಗೆ ನೀಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿದರು.

ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ೧೯೯೯-೨೦೦೦ ಸಾಲಿನಲ್ಲಿ ವ್ಯಾಸಂಗ ಮಾಡಿದ ೧೦ನೇ ತರಗತಿ ವಿದ್ಯಾರ್ಥಿಗಳ ತಂಡ ಬರೋಬ್ಬರಿ ೨ ಲಕ್ಷ ವ್ಯಯಿಸಿ ಶಾಲಾ ವಿದ್ಯಾರ್ಥಿನಿಯರಿಗೆಂದು ನೂತನ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಕಲಿತ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ವಿವಿಧೆಡೆಯಲ್ಲಿ ನೆಲೆಸಿರುವ ೨೧ ಹಳೆಯ ವಿದ್ಯಾರ್ಥಿಗಳು ತಮ್ಮ ಕಣಿವೆ, ಅ. ೬: ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ ಕೈಯಿಂದ ಹಣವನ್ನು ವಿನಿಯೋಗಿಸಿ ಶಾಲೆಗೆ ಅಗತ್ಯವಿದ್ದ ಶೌಚಾಲಯವೊಂದನ್ನು ಕಟ್ಟಿಸಿ ಶಾಲೆಗೆ ನೀಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಿದರು.

ಬಸವನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ೧೯೯೯-೨೦೦೦ ಸಾಲಿನಲ್ಲಿ ವ್ಯಾಸಂಗ ಮಾಡಿದ ೧೦ನೇ ತರಗತಿ ವಿದ್ಯಾರ್ಥಿಗಳ ತಂಡ ಬರೋಬ್ಬರಿ ೨ ಲಕ್ಷ ವ್ಯಯಿಸಿ ಶಾಲಾ ವಿದ್ಯಾರ್ಥಿನಿಯರಿಗೆಂದು ನೂತನ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಕಲಿತ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ವಿವಿಧೆಡೆಯಲ್ಲಿ ನೆಲೆಸಿರುವ ೨೧ ಹಳೆಯ ವಿದ್ಯಾರ್ಥಿಗಳು ತಮ್ಮ ಸಾವಿತ್ರಿ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ಸಾವಿತ್ರಿ, ರತ್ನಾಕರ್, ನಾಗಯ್ಯ, ಸೂಸಿ ತಂಗಚ್ಚನ್, ಅಸಿನ್ ತಾಜ್ ಅವರುಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭ ಹಳೆ ವಿದ್ಯಾರ್ಥಿ ಗಳಾದ ಡಾಟಿ, ವಿದ್ಯಾ, ಆಯೇಷಾ, ಹೇಮಂತ್ ಕುಮಾರ್, ಅರುಣ, ಚಂದ್ರಕಲಾ, ಸುನಿಲ್, ಮಂಜುನಾಥ್, ಆಯಚ್ಚು, ಶಿಕ್ಷಕರಾದ ಶ್ರೀನಿವಾಸ್ ನಾಯಕ್, ಲಕ್ಷ್ಮಣ, ಗುಡ್ಡೆಹೊಸೂರು ಗ್ರಾಪಂ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಪ್ರಮುಖರು ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.