ಕಡಂಗ, ಅ. ೬: ೨೦೨೧-೨೨ನೇ ಸಾಲಿನ ಏಳನೇ ವರ್ಷದ ಕಡಂಗ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯವು ಡಿಸೆಂಬರ್ ೩೦ ರಿಂದ ಜನವರಿ ೨ ರವರೆಗೆ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಸಲಾಗುವುದು ಎಂದು ಕೆಪಿಎಲ್ ಈ ಅವೃತ್ತಿಯ ಆಯೋಜಕ ಅಧ್ಯಕ್ಷ ರಹೀಂ ಮತ್ತು ಕಾರ್ಯದರ್ಶಿ ಬೋಪಣ್ಣ ತಿಳಿಸಿದ್ದಾರೆ.

ಈ ಕ್ರೀಡಾಕೂಟವು ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಹೊರ ತರಲು ಮುಂದಾಗಿದೆ. ಕಡಂಗ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಕರಡ, ಪೊದ್ದಮಾನಿ, ಬೊಳ್ಳುಮಾಡು, ಅರಪಟ್ಟು ಪೊದವಾಡ ಗ್ರಾಮದ ಕ್ರೀಡಾಪಟುಗಳನ್ನು ಒಳಗೊಂಡು ಈ ಬಾರಿಯ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಅವರುಗಳು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಕ್ರೀಡೆಯಲ್ಲಿ ಭಾಗವಹಿಸಲು ಅರ್ಜಿಯನ್ನು ತಾ. ೧೫ರ ಒಳಗೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.