ಸಿದ್ದಾಪುರ, ಅ ೬: ಕಾಲೇಜು ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದು, ಮೃತದೇಹವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಹಂತಕರಿಗೆ ವೀರಾಜಪೇಟೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಿದ್ದಾಪುರ ಸಮೀಪದ ಕಾಫಿ ತೋಟ ಒಂದರ ಲೈನ್ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕನ ಪುತ್ರಿ, ಕಾಲೇಜು ವಿದ್ಯಾರ್ಥಿನಿ ದಿನಾಂಕ ೪.೨.೨೦೧೯ರಲ್ಲಿ ಮುಂಜಾನೆ ಎಂದಿನAತೆ ಕಾಲೇಜಿಗೆ ತೆರಳಿದ್ದವಳು ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ, ನೆಂಟರಿಷ್ಟರ, ಮನೆ ಸ್ನೇಹಿತರ ಮನೆ ಹೀಗೆ ಎಲ್ಲಾ ಭಾಗದಲ್ಲಿ ಹುಡುಕಾಟ ಮಾಡಿದರೂ ಮಗಳ ಸುಳಿವು ದೊರಕಲಿಲ್ಲ. ಈ ಸಂಬAಧ ಪೋಷಕರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಿನಾಂಕ ೫.೨.೨೦೧೯ ರಂದು ಮಗಳು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕಲಂ-೩೬೩ ಐ.ಪಿ.ಸಿ. ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದರು.

ತನಿಖೆಗೆ ಮುಂದಾದ ಪೊಲೀಸರು ಸಂಶಯದಿAದ ಕೆಲವು ವ್ಯಕ್ತಿಗಳ ಮೇಲೆ ನಿಗಾವಹಿಸಿ ತನಿಖೆ ಮುಂದುವರಿಸಿದರು. ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ಹಾಗೂ ಡಿ.ವೈ.ಎಸ್.ಪಿ. ಸುಂದರ್‌ರಾಜ್ ನೇತೃತ್ವದಲ್ಲಿ ಪೊಲೀಸರ ತಂಡವೊAದನ್ನು ರಚಿಸಲಾಗಿತ್ತು. ತನಿಖೆ ವೇಳೆ ಕಾಫಿ ತೋಟದಲ್ಲಿ ಕಾವಲುಗಾರರಾದ ಪಶ್ಚಿಮ ಬಂಗಾಳ ಮೂಲದ ರಂಜಿತ್ ಮತ್ತು ಸಂದೀಪ್ ಎಂಬವರನ್ನು ಸಂದೇಹದ ಮೇಲೆ ಬಂಧಿಸಿದ್ದರು. ವಿಚಾರಣೆ ಸಂದರ್ಭ ವಿದ್ಯಾರ್ಥಿನಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ, ಯಾರಿಗೂ ತಿಳಿಯದಂತೆ ಯುವತಿಯ ಮೃತದೇಹವನ್ನು

(ಮೊದಲ ಪುಟದಿಂದ) ಕಾಫಿ ತೋಟದೊಳಗಿನ ಕಲ್ಲಿನ ಪೊಟರೆ ಹಿಂಬದಿಯಲ್ಲಿ ಹೂತಿಟ್ಟಿರುವದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಕೊಲೆ ಹಾಗೂ ಅತ್ಯಾಚಾರದ ಆರೋಪದಡಿ ಸೆಕ್ಷನ್ ೩೬೬(ಎ), ೩೦೨, ೨೦೧ ರೆ/ವಿ ೩೪ ಐ.ಪಿ.ಸಿ, ೪. ಮತ್ತು ೬ ಪೋಸ್ಕೊ ಮತ್ತು ೩(೨)ವಿಎ ಎಸ್.ಸಿ/ ಎಸ್.ಟಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಪೊಲೀಸರು ದಿನಾಂಕ ೩.೫.೨೦೧೯ ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ವೀರಾಜಪೇಟೆ ೨ನೇ ಅಪರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಆರ್. ದಿಂಡಲ್ ಕೊಪ್ಪ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ರಂಜಿತ್ ಎಕ್ಕ (೨೧) ಹಾಗೂ ಸಂಜಿತ್ (ಸಂದೀಪ್-೩೦) ಎಂಬಿಬ್ಬರಿಗೆ ರೂ.೧.೯೦ಲಕ್ಷ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಹಣದಲ್ಲಿ ಸಂತ್ರಸ್ತ ಯುವತಿಯ ಕುಟುಂಬಕ್ಕೆ ರೂ೧.೮೦ಲಕ್ಷ ಪರಿಹಾರವಾಗಿ ಹಾಗೂ ರೂ. ೧೦ ಸಾವಿರ ಹಣವನ್ನು ಸರಕಾರಕ್ಕೆ ಪಾವತಿ ಮಾಡುವಂತೆ ತೀರ್ಪಿನ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರ ಸರ್ಕಾರಿ ಅಭಿಯೋಜಕ ಯಾಸೀನ್ ಅಹಮ್ಮದ್ ವಾದ ಮಂಡಿಸಿದರು.

-ಎ.ಎನ್ ವಾಸು