ಮಡಿಕೇರಿ, ಅ. ೫ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸರಾಸರಿ ಮಳೆ ಕಳೆದ ಸಾಲಿಗಿಂತ ಹೆಚ್ಚಾಗಿದ್ದು, ಇದೀಗ ಶತಕದ ಗಡಿ ದಾಟಿದಂತಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕ ಜಿಲ್ಲೆಯಲ್ಲಿ ಸರಾಸರಿ ೯೮.೭೨ ಇಂಚು ಮಳೆಯಾಗಿತ್ತು. ಇದೀಗ ಈ ಅಂಕಿಅAಶ ೧೦೧.೦೭ ಇಂಚಿನಷ್ಟಾಗಿದ್ದು, ಇನ್ನೂ ಮಳೆಗಾಲದ ಚಿತ್ರಣ ಮರೆಯಾದಂತಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಮಳೆ - ಬಿಸಿಲಿನಾಟ ಕಂಡುಬರುತ್ತಿದ್ದು, ವಾತಾವರಣದಲ್ಲಿ ದಿಢೀರನೆ ಬದಲಾವಣೆಯಾಗುತ್ತಿದೆ. ಬಿಸಿಲಿನ ಸನ್ನಿವೇಶ ಇದ್ದರೂ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿರುವುದರೊಂದಿಗೆ ಅಲ್ಲಲ್ಲಿ ಭಾರೀ ಮಳೆ ಬೀರುತ್ತಿರುವುದು ಕಳೆದ ಕೆಲವು ದಿನಗಳಿಂದ ಗೋಚರಿಸುತ್ತಿದೆ. ರಾತ್ರಿ ವೇಳೆಯೂ ಅಲ್ಲಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಮಳೆಯೊಂದಿಗೆ ಗುಡುಗು, ಮಿಂಚು ಸಹ ಎದುರಾಗುತ್ತಿರುವುದು ವಿಶೇಷವಾಗಿ ಕಂಡುಬರುತ್ತಿದೆ. ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಮಣ್ಣು ತೇವಾಂಶದಿAದಲೇ ಕೂಡಿದೆ. ಕಾಫಿ ಫಸಲಿನ ಮೇಲೆ ಈ ವಾತಾವರಣ ವ್ಯತ್ತಿರಿಕ್ತ ಪರಿಸ್ಥಿತಿಯನ್ನುಂಟು ಮಾಡುತ್ತಿದ್ದು, ಇದು ಬೆಳೆಗಾರರಲ್ಲಿ ಆತಂಕ ಹೆಚ್ಚಿಸುತ್ತಿದೆ.

ಜಿಲ್ಲಾ ಸರಾಸರಿ ೧೦೧ ಇಂಚುಗಳಷ್ಟಾಗಿದ್ದರೆ ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷದಷ್ಟೇ ಪ್ರಮಾಣದಲ್ಲಿ ಸರಾಸರಿ ಮಳೆ ಬಿದ್ದಿದೆ. ಕಳೆದ ಬಾರಿ ಜನವರಿಯಿಂದ ಈತನಕ ೧೩೮.೧೨ ಇಂಚು ಮಳೆಯಾಗಿದ್ದರೆ ಈ ಬಾರಿ ೧೩೭.೯೦ ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಬಾರಿ ಈ ಅವಧಿಯಲ್ಲಿ ೯೧.೭೪ ಇಂಚು ಮಳೆಯಾಗಿದ್ದರೆ ಈ ವರ್ಷ ೮೫.೨೭ ಇಂಚು ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ಮಳೆ ಹೆಚ್ಚಾಗಿದೆ. ಕಳೆದ ವರ್ಷ ಈತನಕ ೬೬.೩೦ ಇಂಚು ಮಳೆಯಾಗಿದ್ದರೆ ಈ ಬಾರಿ ೮೦.೦೪ ಇಂಚು ಮಳೆ ಈತನಕ ಬಿದ್ದಿದೆ.