ಕಣಿವೆ, ಅ. ೫: ಆಹಾರಕ್ಕಾಗಿ ಹಾಹಾಕಾರ ಪಟ್ಟು ಕಾಡಿನಿಂದ ನಾಡಿಗೆ ಬಂದAತಹ ಎರಡು ಕಾಡಾನೆಗಳು ಕಾಡಿಗೆ ಮರಳುವು ದನ್ನು ಮರೆತು ತೋಟದಂತಿದ್ದ ಗಿಡ ಪೊದೆಗಳ ಒಳಗೆ ಮೊಕ್ಕಾಂ ಹೂಡಿದ ಪ್ರಸಂಗ ಭಾನುವಾರ ಆನೆಕಾಡು ಅರಣ್ಯದಂಚಿನ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.

ಬೆಟ್ಟಗೇರಿ ಗ್ರಾಮದ ಕೃಷಿಕ ಆನೇರ ಹರೀಶ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ನುಗ್ಗಿದ ಜೋಡಿ ಕಾಡಾನೆಗಳು ಅಲ್ಲೇ ತೋಟದೊಳಗೆ ಸಿಕ್ಕಂತಹ ಸೊಪ್ಪು - ಸೆದೆ, ಮರದ ತೊಗಟೆಗಳು, ಬಾಳೆ, ತೆಂಗು ಹಾಗೂ ಅಡಿಕೆ ಮೊದಲಾದ ಫಸಲು ತಿಂದು ಹೊಟ್ಟೆ ತುಂಬಿಸಿಕೊAಡಿವೆ.

ಬಳಿಕ ತುಂಬಿದ ಹೊಟ್ಟೆ ಯಿಂದಾಗಿ ಬಂದ ದಾರಿಯನ್ನೇ ಮರೆತ ಈ ಕಾಡಾನೆಗಳು ತೋಟದೊಳಗಿನ ಗಿಡ - ಮರಗಳ ಒಳಗೆ ಆಶ್ರಯ ಪಡೆದವು. ಬಳಿಕ ಬೀಡು ಬಿಟ್ಟ ಕಾಡಾನೆಗಳ ವಿಚಾರ ಗ್ರಾಮ ವಾಸಿಗಳಿಗೆ ತಿಳಿದೊಡನೆ ಬಹುತೇಕರು ಬಂದು ಅಲ್ಲಲ್ಲಿ ಮರಗಳನ್ನು ಏರಿ ಸಂತಸದಲ್ಲಿ ಕುಳಿತರು. ಬೆಳೆ ನಷ್ಟದ ಸಂಕಷ್ಟದಲ್ಲಿ ದ್ದವರು ಅಲ್ಲಲ್ಲಿ ನಿಂತು ಕೂಗುತ್ತಾ ಬೊಬ್ಬೆ ಇಟ್ಟು ಕಾಡಾನೆಗಳನ್ನು ಕಾಡಿಗೆ ಮರಳಿಸುವ ಯತ್ನ ಮಾಡಿದರು. ಆದರೆ ಜನರ ದಂಡನ್ನು ಕಂಡ ಬುದ್ಧಿವಂತ ಕಾಡಾನೆಗಳು ಜಪ್ಪೆಂದರೂ ಕಾಡಿಗೆ ಮರಳಲೇ ಇಲ್ಲ.

ಅತ್ತ ಕಾಡಿನೊಳಗೆ ಈ ಜೋಡಿ ಆನೆಗಳ ಸಾಂಗತ್ಯದಲ್ಲಿದ್ದ ಸಲಗವೊಂದು ನಾಡಿಗೆ ತೆರಳಿ ಮರು ದಿನವಾದರೂ ಈ ಕಾಡಾನೆಗಳು ಅರಣ್ಯಕ್ಕೆ ತೆರಳದಿರುವುದನ್ನು ಕಂಡು ದಿಗ್ಭಾçಂತಗೊAಡು ನಾಡಿನತ್ತ ಈ ಜೋಡಿ ಆನೆಗಳನ್ನು ಹುಡುಕಿಕೊಂಡು ಬೆಟ್ಟಗೇರಿಯತ್ತ ಧಾವಿಸಿ ಬಂದು ಜೋಡಿಯಾನೆಗಳನ್ನು ಕಂಡು ಭೇಟಿ ಯಾಗಿ ಜೋಪಾನವಾಗಿ ಅರಣ್ಯಕ್ಕೆ ಕರೆದೊಯ್ದ ಬಗ್ಗೆ ಬೊಟ್ಟುಮನೆ ಸತ್ಯ ಎಂಬ ಸ್ಥಳೀಯರು ‘ಶಕ್ತಿ’ಯೊಂದಿಗೆ ಹೇಳಿದರು.

ಕಳೆದ ತಿಂಗಳ ಹಿಂದಷ್ಟೇ ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ಕಾಡಿನಿಂದ ನಾಡಿಗೆ ಬಂದAತಹ ಒಂಟಿ ಸಲಗವೊಂದನ್ನು ಬಸವನಹಳ್ಳಿ ಬಳಿ ರೈತರೊಬ್ಬರು ತಾವು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತೆ ಎಂಬ ಸ್ವಾರ್ಥಕ್ಕೆ ತಮ್ಮ ತೋಟದ ಬೇಲಿಯ ತಂತಿ ಯಲ್ಲಿ ವಿದ್ಯುತ್ ಹರಿಸಿದ್ದ ಪರಿಣಾಮ ಸಾವನ್ನಪ್ಪಿತ್ತು. ಹಾಗೆಯೇ ೧೫ ದಿನದ ಹಿಂದಷ್ಟೇ ಕಾವೇರಿ ನದಿ ದಂಡೆಯ ರಾಣಿಗೇಟಿನ ಬಳಿಯ ಎಂಭತ್ತೆಕ್ರೆ ಪೈಸಾರಿ ಎಂಬಲ್ಲಿ ಮತ್ತೊಂದು ಸಲಗ ವನ್ನು ಅಲ್ಲಿನ ತೋಟ ಮಾಲೀಕರು ವಿದ್ಯುತ್ ಹರಿಸಿ ಧಾರುಣವಾಗಿ ಮೃತಪಟ್ಟಿತ್ತು. ಆಹಾರ ಹುಡುಕಿ ನಾಡಿಗೆ ತೆರಳುವ ಒಡನಾಡಿಗಳನ್ನು ಬಲಿ ಪಡೆಯುತ್ತಿರುವ ಜನರ ಕಿರುಕುಳಕ್ಕೆ ಬೇಸತ್ತ ಸಲಗ, ಜೋಡಿಯಾನೆಗಳು ನಾಡಿನಿಂದ ಮರಳದೇ ಇದ್ದುದನ್ನು ಮನಗಂಡು ಭಯಭೀತಗೊಂಡು ಕಾಡಿನಿಂದ ನಾಡಿಗೆ ಬಂದು ಕಾಫಿ ತೋಟದಲ್ಲಿದ್ದ ಜೋಡಿ ಆನೆಗಳನ್ನು ಹುಡುಕಿ ಜೋಪಾನವಾಗಿ ಅರಣ್ಯಕ್ಕೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆಯ ಧರ್ಮವನ್ನು ಪಾಲಿಸಿದೆ.

ಇತ್ತ ತೋಟದೊಳಗೆ ಒಂದು ರಾತ್ರಿ ಹಾಗೂ ಹಗಲು ಮೊಕ್ಕಾಂ ಹೂಡಿದ್ದ ಜೋಡಿ ಕಾಡಾನೆಗಳಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿರುವ ಕೃಷಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಈಗ ಮುಸುಕಿನ ಜೋಳದ ಸಮಯ ಆದ ಕಾರಣ ಕಾಡಂಚಿನ ಬಹುತೇಕ ಕೃಷಿಕರು ಅರೆ ನೀರಾವರಿಯ ಮುಖ್ಯ ಬೆಳೆಯಾಗಿ ಬೆಳೆದಿರುವ ಮುಸುಕಿನ ಜೋಳವನ್ನು ತಮ್ಮ ಜಮೀನಿನಲ್ಲಿಯೇ ದಾಸ್ತಾನಿಟ್ಟಿ ರುವುದನ್ನು ತಮ್ಮ ಚಾಣಾಕ್ಷತೆಯಿಂದ ಗ್ರಹಿಸುವ ಕಾಡಾನೆಗಳು ಹಸಿದ ಹೊಟ್ಟೆಯ ಪಾಡು ತಡೆಯಲಾರದೇ ನಾಡಿಗೆ ಬಂದು ಈ ರೀತಿ ಬೆಳೆ ನಾಶ ಮಾಡುತ್ತಿವೆ.

- ಕೆ.ಎಸ್. ಮೂರ್ತಿ