ಮಡಿಕೇರಿ: ಮಡಿಕೇರಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ನಂತರದ ಬಾಲಕರ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸೇರಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಅರಸು ಭವನದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿ ನಂತರ ಸ್ವಚ್ಛತಾ ಶ್ರಮದಾನಕ್ಕೆ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ ಅವರು ಚಾಲನೆ ನೀಡಿದರು. ಈ ಸಂದರ್ಭ ಪತ್ರಾಂಕಿತ ವ್ಯವಸ್ಥಾಪಕಿ ಕವಿತಾ ಪಿ.ಪಿ., ಕಚೇರಿ ಮೇಲ್ವಿಚಾರಕ ಶಿವಶಂಕರ್, ಪ್ರಥಮ ದರ್ಜೆ ಸಹಾಯಕ ಕೆ.ಬಿ. ದಯಾನಂದ ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
ಅದೇ ರೀತಿ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು, ವಿದ್ಯಾರ್ಥಿ ನಿಲಯಗಳಲ್ಲಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ನಿಲಯ ಮೇಲ್ವಿಚಾರಕರು, ಅಡುಗೆ ಸಿಬ್ಬಂದಿಗಳು, ವಸತಿ ಶಾಲೆಗಳ ಪ್ರಾಂಶುಪಾಲರು, ಬೋಧಕ/ಬೋಧಕೇತರ ಸಿಬ್ಬಂದಿಗಳು, ನಿಲಯಪಾಲಕರು, ಎಲ್ಲಾ ವಿದ್ಯಾರ್ಥಿ ನಿಲಯಗಳ ಮತ್ತು ವಸತಿ ಶಾಲೆಯ ವಿದ್ಯಾರ್ಥಿಗಳು ಸಕ್ರಿಯವಾಗಿ ಶ್ರಮದಾನದಲ್ಲಿ ಭಾಗವಹಿಸಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಅರಿವು ಮೂಡಿಸಿದರು.ಗೋಣಿಕೊಪ್ಪಲು: ಗೋಣಿಕೊಪ್ಪ ಕಾವೇರಿ ಕಾಲೇಜು ಎನ್.ಸಿ.ಸಿ. ಘಟಕದ ವತಿಯಿಂದ ರಾಷ್ಟçಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹುದ್ದೂರ್ ಶಾಸ್ತಿçಜೀ ಅವರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭ ಪ್ರಾಂಶುಪಾಲ ಪ್ರೊ. ಮಾಳೇಟಿರ ಬಿ. ಕಾವೇರಪ್ಪನವರು ಗಾಂಧೀಜಿ ಹಾಗೂ ಶಾಸ್ತಿçಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಅಹಿಂಸೆಯ ಮೂಲಕವೇ ಸ್ವಾತಂತ್ರö್ಯವನ್ನು ತಂದುಕೊಟ್ಟ ಮಹಾನ್ ಚೇತನ ಮಹಾತ್ಮಗಾಂಧೀಜಿ ಹಾಗೂ ಮಾಜಿ ಪ್ರಧಾನಿಯಾಗಿದ್ದರೂ ಸರಳ ವ್ಯಕ್ತಿತ್ವದ ಮೂಲಕ ಆದರ್ಶ ಜೀವನವನ್ನು ನಡೆಸಿದ ಲಾಲ್ ಬಹುದ್ದೂರ್ ಶಾಸ್ತಿç ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿರಬೇಕು ಎಂದರು.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ ಎನ್.ಸಿ.ಸಿ. ಕೆಡೆಟ್ಗಳು ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ನಂತರ ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ನಡೆಸಿದರು.
ಈ ವೇಳೆ ಎನ್.ಸಿ.ಸಿ. ಅಧಿಕಾರಿಗಳಾದ ಲೆಪ್ಟಿನೆಂಟ್ ಎಂ.ಆರ್. ಅಕ್ರಮ್, ಲೆಪ್ಟಿಲೆಂಟ್ ಐ.ಡಿ. ಲೇಪಾಕ್ಷಿ ಉಪಾನ್ಯಾಸಕರಾದ ಕೆ.ಕೆ. ಚಿತ್ರಾವತಿ ಅಜೆಯ್ ಕುಮಾರ್, ರಜನಿ, ತೀರ್ಥೇಶ್ ಕಾಲೇಜು ಅಧೀಕ್ಷಕ ಸೋಮನಾಥ್, ಕಾಲೇಜು ಸಿಬ್ಬಂದಿ ವರ್ಗ ಹಾಗೂ ಎನ್.ಸಿ.ಸಿ. ಕೆಡೆಟ್ಗಳು ಉಪಸ್ಥಿತರಿದ್ದರು.ಸೋಮವಾರಪೇಟೆ: ಮಹಾತ್ಮ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸಾ ತತ್ವವನ್ನು ಪಾಲಿಸಿದರೆ ನಿಜವಾದ ಸಮಾಜಸೇವಕರಾಗಿ ಸಾರ್ಥಕತೆ ಪಡೆದುಕೊಳ್ಳಬಹುದು ಎಂದು ಇನ್ನರ್ ವ್ಹೀಲ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷೆ ಪುಷ್ಪ ಗುರುರಾಜ್ ಅಭಿಪ್ರಾಯಿಸಿದರು.
ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಕ್ಲಬ್ಗೆ ಅಧಿಕೃತ ಭೇಟಿ ನೀಡಿ ನಂತರ ಒಕ್ಕಲಿಗರ ಸಂಘದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೋಟರಿ ಸಂಸ್ಥೆಯ ಅಂಗಸAಸ್ಥೆಯಾದ ಇನ್ನರ್ ವ್ಹೀಲ್ ಕ್ಲಬ್ ಮುಖ್ಯ ಉದ್ದೇಶ ಸ್ನೇಹ ಮತ್ತು ಸಮಾಜಸೇವೆ. ಪ್ರತಿಯೊಬ್ಬರಲ್ಲೂ ತಮ್ಮ ಕೆಲಸದ ಬಗ್ಗೆ ಗೌರವವಿರಬೇಕು. ಪ್ರತಿಯೊಬ್ಬ ಮಹಿಳೆಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ನಾನಾ ಕಾರಣಗಳಿಂದ ಸೌಲಭ್ಯ ವಂಚಿತರಾಗಿರುತ್ತಾರೆ. ಅಂತಹ ಸೌಲಭ್ಯ ಕೊಡಿಸಲು ಸದಸ್ಯರು ಶ್ರಮಪಡಬೇಕು. ಹೆಣ್ಣು ಆರೋಗ್ಯವಾಗಿದ್ದರೆ ಸಂಸಾರ ಆರೋಗ್ಯವಾಗಿರುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಬೆಂಗಳೂರು ಉತ್ತರ ಕ್ಲಬ್ನ ನಿಕಟಪೂರ್ವ ಅಧ್ಯಕ್ಷೆ ನಂದಿನಿ ಪ್ರಭುದೇವ್ ಸೋಮವಾರಪೇಟೆ ಕ್ಲಬ್ಗೆ ರೂ. ೧೦ ಸಾವಿರ ಸಹಾಯಧನ ನೀಡಿದರು. ಕಳೆದ ಸಾಲಿನಲ್ಲಿ ಕ್ಲಬ್ನ ಉತ್ತಮ ಸೇವೆಗಾಗಿ ನಿಕಟಪೂರ್ವ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಪ್ರಶಸ್ತಿ ಪತ್ರ ಪಡೆದುಕೊಂಡರು. ಇದೇ ಸಂದರ್ಭ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮ್ರಿತಾ ಕಿರಣ್, ಬುಲೆಟಿನ್ ಸಂಪಾದಕಿ ತನ್ಮಯಿ ಪ್ರವೀಣ್, ಸರಿತಾ ರಾಜೀವ್ ಇದ್ದರು.ನಾಪೋಕ್ಲು: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ನಾಪೋಕ್ಲು, ಕೊಳಕೇರಿ ಎಸ್ಡಿಪಿಐ ಸಂಘದ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತಿç ಅವರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ವಿವಿಧ ಧರ್ಮಗಳ ಸಂದೇಶ, ವಿಚಾರ ಮಂಡನೆ, ಸಾಮೂಹಿಕ ಭಜನೆ ನಡೆಯಿತು.
ಈ ಸಂದರ್ಭ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲೆ ಸೌಭಾಗ್ಯ, ಶಿಕ್ಷಕರಾದ ಉಷಾರಾಣಿ, ಮಾದೇಶ ಪಿ., ಮಹಾಲಕ್ಷಿö್ಮÃ, ಅಭಿಷೇಕ್ ಬಂಡೆಪ್ಪ, ನಾಪೋಕ್ಲು ಮತ್ತು ಕೊಳಕೇರಿ ಎಸ್ಡಿಪಿಐ ಸಂಘದ ಸದಸ್ಯರು ಮತ್ತಿತರರು ಇದ್ದರು.ಶ್ರೀಮಂಗಲ: ಭಾರತೀಯ ಜನತಾ ಪಕ್ಷ ಶ್ರೀಮಂಗಲ ಶಕ್ತಿ ಕೇಂದ್ರದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜನ್ಮ ದಿನದ ಅಂಗವಾಗಿ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಜಯ, ಶ್ರೀಮಂಗಲ ಶಕ್ತಿ ಕೇಂದ್ರದ ಅಧ್ಯಕ್ಷ ಬಾಚಂಗಡ ದಾದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚೋಕಿರ ಕಲ್ಪನ ತಿಮ್ಮಯ್ಯ, ಶ್ರೀಮಂಗಲ ಬೂತ್ ಉಸ್ತುವಾರಿ ಕಾಳಿಮಡ ತಮ್ಮು ಮುತ್ತಣ್ಣ, ಬೀರುಗ ಬೂತ್ ಅಧ್ಯಕ್ಷ ಅಜ್ಜಮಾಡ ಪ್ರಮೋದ್, ಪಂಚಾಯಿತಿ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಯ್ಯಮಡ ಉದಯ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಬಿಜೆಪಿ ಕೃಷಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಕೆ.ಎನ್. ನಂದೀಪ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಸೇರಿದಂತೆ ಬಿ.ಜೆ.ಪಿ. ಪ್ರಮುಖರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಕರುಣಾ ಟ್ರಸ್ಟ್ನ ಸಿಬ್ಬಂದಿಗಳು ಭಾಗವಹಿಸಿದ್ದರು.ಕಡಂಗ: ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕಿನ ಕರಡ ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಸ್ವಚ್ಛತಾ ಅಭಿಯಾನವನ್ನು ಏರ್ಪಡಿಸಿದ್ದರು.
ಈ ಸಂದರ್ಭ ಪಂಚಾಯಿತಿ ಸದಸ್ಯ ವಿಲಿನ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಣ್, ಸುಷ ಮೊಣ್ಣಯ್ಯ ಹಾಜರಿದ್ದರು.
ಪರಿಸರ ಸ್ವಚ್ಛತೆ ಅಂಗವಾಗಿ ಊರಿನ ಹಿರಿಯರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.ಪೆರಾಜೆ: ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನದ ಪ್ರಯುಕ್ತ ಪೆರಾಜೆ ಜಂಕ್ಷನ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಕಳೆ, ಗಿಡಗಂಟಿಗಳನ್ನು ತೆಗೆದು ಶುಚಿತ್ವಗೊಳಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಬಿಜೆಪಿ ಪ್ರಮುಖರಾದ ಮೋನಪ್ಪ ಕುಂಬಳಚೇರಿ, ಮಡಿಕೇರಿ ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಚಂದ್ರಶೇಖರ್ ಕೊಡ್ಯಗುಂಡಿ, ಅಬೂಬಕ್ಕರ್ ಪೆರಾಜೆ ಸೇರಿದಂತೆ ಇತರರು ಭಾಗವಹಿಸಿದ್ದರು.ಪೆರಾಜೆ: ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನದ ಪ್ರಯುಕ್ತ ಪೆರಾಜೆ ಜಂಕ್ಷನ್ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಕಳೆ, ಗಿಡಗಂಟಿಗಳನ್ನು ತೆಗೆದು ಶುಚಿತ್ವಗೊಳಿಸಲಾಯಿತು.
ಈ ಸಂದರ್ಭ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಬಿಜೆಪಿ ಪ್ರಮುಖರಾದ ಮೋನಪ್ಪ ಕುಂಬಳಚೇರಿ, ಮಡಿಕೇರಿ ತಾಲೂಕು ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಚಂದ್ರಶೇಖರ್ ಕೊಡ್ಯಗುಂಡಿ, ಅಬೂಬಕ್ಕರ್ ಪೆರಾಜೆ ಸೇರಿದಂತೆ ಇತರರು ಭಾಗವಹಿಸಿದ್ದರು.ನಾಪೋಕ್ಲು: ಅಂತರAಗದ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು. ಆದರೆ ಮಾತ್ರ ಮನೆ, ಪರಿಸರ, ಸಮಾಜದ ಸ್ವಚ್ಛತೆಯಾಗಲು ಸಾಧ್ಯ ಎಂದು ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು.
ನಾಪೋಕ್ಲು ಲಯನ್ಸ್ ಕ್ಲಬ್ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯ ಸ್ವಚ್ಛ ಭಾರತ ಕನಸನ್ನು ಪ್ರಧಾನಿ ಮೋದಿ ಅವರು ನನಸು ಮಾಡಲು ಹಲವಾರು ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಸ್ವಚ್ಛತೆ ಮತ್ತು ಆರೋಗ್ಯ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರೂ ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಲಯನ್ಸ್ ಸಂಸ್ಥೆಯು ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯೊAದಿಗೆ ಕೈಜೋಡಿಸಲಿದೆ ಎಂದರು.
ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಮಹಾತ್ಮ ಗಾಂಧಿಯ ಆದರ್ಶ ಹಾಗೂ ತತ್ವಗಳನ್ನು ಪಾಲಿಸಬೇಕಾದರೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮ ಪಂಚಾಯಿತಿ ಸ್ವಚ್ಛತೆ ಮತ್ತು ಕಸ ವಿಂಗಡಣೆಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಸಾರ್ವಜನಿಕರು ಕಸ ವಿಂಗಡಣೆ ಮಾಡಿಕೊಡುವದರೊಂದಿಗೆ ಕಡ್ಡಾಯವಾಗಿ ಬಟ್ಟೆ ಚೀಲಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಸ್ವಚ್ಛ ಭಾರತ ಕಾರ್ಯಕ್ರಮದ ಅಧ್ಯಕ್ಷೆ ಪಾರ್ವತಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಲಯನ್ಸ್ ವಲಯಾಧ್ಯಕ್ಷ ಕೋಟೆರ ಡಾ. ಪಂಚಮ್ ತಿಮ್ಮಯ್ಯ, ಲಯನ್ಸ್ ಖಜಾಂಚಿ ಕೇಟೋಳಿರ ಕುಟ್ಟಪ್ಪ ಇದ್ದರು.
ಲಯನ್ಸ್ ಸದಸ್ಯ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಪ್ರಾರ್ಥನೆ, ಮುಕ್ಕಾಟಿರ ವಿನಯ್ ಸ್ವಾಗತಿಸಿ, ಲಯನ್ಸ್ ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ ವಂದಿಸಿದರು. ನಂತರ ಜಂಟಿಯಾಗಿ ಪಟ್ಟಣ ಹಾಗೂ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.ಪೊನ್ನಂಪೇಟೆ: ಪೊನ್ನಂಪೇಟೆ ಸಮೀಪದ ನಡಿಕೇರಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಶ್ರಮದಾನ ಮಾಡಲಾಯಿತು. ಮುಖ್ಯಶಿಕ್ಷಕಿ ಇಂದಿರಾ, ಸಹಶಿಕ್ಷಕಿ ಸುಮ ಹಾಗೂ ಪೋಷಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆ ಸಮೀಪದ ನಡಿಕೇರಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಶ್ರಮದಾನ ಮಾಡಲಾಯಿತು. ಮುಖ್ಯಶಿಕ್ಷಕಿ ಇಂದಿರಾ, ಸಹಶಿಕ್ಷಕಿ ಸುಮ ಹಾಗೂ ಪೋಷಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಅಂಜನಗೇರಿ, ಬೆಟ್ಟಗೇರಿ ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ಜರುಗಿತು. ಗ್ರಾಮವೇ ಸೀಲ್ಡೌನ್ ಆದಂತಹ ಸಂದರ್ಭ ಬೆಟ್ಟಗೇರಿ ಬೆಳೆಗಾರ ವಿನೋದ್ ಶಿವಪ್ಪ ತೋಟದ ಕಾರ್ಮಿಕರಿಗೆ ಕೆಲಸ ರಹಿತ ಸಂಬಳ ನೀಡಿದ್ದರು.
ಆಟೋ ಚಾಲಕ ಆಲ್ವಿನ್ ಅವರು, ಕೋವಿಡ್-೧೯ರ ಸಂದರ್ಭ ತಮ್ಮ ಜೀವದ ಹಂಗನ್ನು ತೊರೆದು ಹಗಲು-ರಾತ್ರಿ ಊರಿನ ಗ್ರಾಮಸ್ಥರಿಗೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಮತ್ತು ಅಗತ್ಯ ವಸ್ತುಗಳನ್ನು ತಮ್ಮ ಆಟೋದ ಸಹಾಯದಿಂದ ಎಲ್ಲಾ ಸೀಲ್ಡೌನ್ ಪ್ರದೇಶಗಳಿಗೆ ತಲುಪಿಸಿ ಜನರ ಮೂಲಭೂತ ಅಗತ್ಯತೆಗಳನ್ನು ಪೂರೈಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಪದ್ಮನಾಭ ಅವರು ಸರ್ವರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಹೆಚ್.ಎಂ. ಕರಿಯ ಮಾತನಾಡಿ, ಸಾಧಕರಿಗೆ ಸನ್ಮಾನ ಮಾಡಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭ ಸ್ತಿçà ಶಕ್ತಿ ಸಂಘಟನೆಯ ಸದಸ್ಯರು, ಗ್ರಾಮಸ್ಥರು, ಶಿಕ್ಷಕರು, ತೋಟದ ಕಾರ್ಮಿಕರು ಹಾಜರಿದ್ದರು.ನಿಟ್ಟೂರು: ಸ್ವಾತಂತ್ರö್ಯ ಅಮೃತ ಮಹೋತ್ಸವ ಮತ್ತು ಗಾಂಧಿ ಜಯಂತಿ ಅಂಗವಾಗಿ "ಸ್ವಚ್ಛ ಗ್ರಾಮ ಸುಂದರ ಗ್ರಾಮ" ಘೋಷಣೆಯೊಂದಿಗೆ ಪಂಚಾಯಿತಿಯ ಮಲ್ಲೂರ್, ಕಾರ್ಮಾಡು, ವಡ್ಡರಮಾಡು, ಕೊಟ್ಟಗೇರಿ ವಾರ್ಡ್ಗಳಲ್ಲಿ ಏಕಕಾಲಕ್ಕೆ ಆರಂಭವಾದ ಸ್ವಚ್ಛತಾ ಕಾರ್ಯಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಮತ್ತು ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು ಚಾಲನೆ ನೀಡಿದರು. ತದನಂತರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ತಿçà ಶಕ್ತಿ, ಸ್ವಸಹಾಯ ಗುಂಪುಗಳ, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ೩೦೦ ಮಂದಿ ವಿವಿಧ ವಾರ್ಡ್ಗಳಲ್ಲಿ ತೊಡಗಿಸಿಕೊಂಡರು.ನಿಟ್ಟೂರು: ಸ್ವಾತಂತ್ರö್ಯ ಅಮೃತ ಮಹೋತ್ಸವ ಮತ್ತು ಗಾಂಧಿ ಜಯಂತಿ ಅಂಗವಾಗಿ "ಸ್ವಚ್ಛ ಗ್ರಾಮ ಸುಂದರ ಗ್ರಾಮ" ಘೋಷಣೆಯೊಂದಿಗೆ ಪಂಚಾಯಿತಿಯ ಮಲ್ಲೂರ್, ಕಾರ್ಮಾಡು, ವಡ್ಡರಮಾಡು, ಕೊಟ್ಟಗೇರಿ ವಾರ್ಡ್ಗಳಲ್ಲಿ ಏಕಕಾಲಕ್ಕೆ ಆರಂಭವಾದ ಸ್ವಚ್ಛತಾ ಕಾರ್ಯಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಮತ್ತು ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು ಚಾಲನೆ ನೀಡಿದರು. ತದನಂತರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ತಿçà ಶಕ್ತಿ, ಸ್ವಸಹಾಯ ಗುಂಪುಗಳ, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ೩೦೦ ಮಂದಿ ವಿವಿಧ ವಾರ್ಡ್ಗಳಲ್ಲಿ ತೊಡಗಿಸಿಕೊಂಡರು.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಂಧಿ ಜಯಂತಿಯನ್ನು ಆಚರಿಸಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಗಾಂಧಿ ಭಾವಚಿತ್ರಕ್ಕೆ ಪುಷ್ಪ ಮಾಲೆ ತೊಡಿಸಿ ನಮಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ, ಸಹ ಶಿಕ್ಷಕ ದಾಕ್ಷಯಿಣಿ, ನಳಿನಿ, ಶ್ರೀಜಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮ್ಯ ಇದ್ದರು.