ಸಿದ್ದಾಪುರ, ಅ. ೫: ಕ್ಷÄಲ್ಲಕ ವಿಚಾರದಲ್ಲಿ ಕಾರ್ಮಿಕರಿಬ್ಬರ ನಡುವೆ ಕಲಹ ನಡೆದು ಕಾರ್ಮಿಕನೋರ್ವ ಮತ್ತೊಬ್ಬ ಕಾರ್ಮಿಕನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ.

ಮೂಲತಃ ಜಾರ್ಖಂಡ್ ರಾಜ್ಯದ ನಿವಾಸಿಗಳಾದ ಅರೆಕಾಡು ಬಲಂಜಿಕೆರೆ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ದೀಪಕ್ ರಾಮರ್ (೩೦) ಹಾಗೂ ಸಂದೀಲ್ ಟರ್ಕಿ (೫೮) ಇವರಿಬ್ಬರ ನಡುವೆ ಕಲಹ ನಡೆದು ದೀಪಕ್ ರಾಮರ್ ಎಂಬ ಯುವಕ ಸಂದೀಲ್ ಟರ್ಕಿಯ ತಲೆಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸಂದೀಲ್ ಟರ್ಕಿಯ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿರುತ್ತದೆ. ಗಾಯಾಳುವಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರೋಪಿ ದೀಪಕ್ ರಾಮರ್‌ನನ್ನು ಸಿದ್ದಾಪುರ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.