ತಾ. ೭ ರಂದು ನಡೆಯಲಿರುವ ಸಭೆ ಬಳಿಕ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಈ ಬಗ್ಗೆ ಮಾತನಾಡಿರುವ ಅವರು, ತಲಕಾವೇರಿಯಲ್ಲಿ ತೀರ್ಥೋದ್ಭವ ದರ್ಶನಕ್ಕೆ ಸಂಬAಧಪಟ್ಟAತೆ ಕೆಲವೊಂದು ನಿರ್ಬಂಧ ವಿಧಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ವಿರೋಧ ವ್ಯಕ್ತವಾಗುತ್ತಿದ್ದು, ಇದರೊಂದಿಗೆ ಕೊಡಗಿನ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಕೊಡಗಿನ ಜನಪ್ರತಿನಿಧಿಗಳು ಒಂದಾಗಿದ್ದೇವೆ. ತೀರ್ಥೋದ್ಭವ ಭಕ್ತಾದಿಗಳ ಧಾರ್ಮಿಕ ನಂಬಿಕೆಯಾಗಿದೆ. ಇದನ್ನು ಅರಿತು ನಾವುಗಳು ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿರುವ ವೀಣಾ ಅಚ್ಚಯ್ಯ ಅವರು ತಾ. ೭ ರಂದು ಭಾಗಮಂಡಲದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಅಲ್ಲಿಯ ತನಕ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದ್ದಾರೆ.