ಹಿತರಕ್ಷಣಾ ಸಮಿತಿ ಮನವಿ
ಮಡಿಕೇರಿ, ಅ. ೬: ಕಂದಾಯ ಇಲಾಖೆಗೆ ಸಂಬAಧಿಸಿದAತೆ ಬೆಳೆಗಾರರಿಗೆ ಹಲವು ದಾಖಲಾತಿಗಳ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹಾಗೂ ಪದಾಧಿಕಾರಿಗಳು ವೀರಾಜಪೇಟೆ - ಪೊನ್ನಂಪೇಟೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಆರ್.ಟಿ.ಸಿ.ಯಲ್ಲಿ ಸರ್ವೆ ನಂಬರ್ ಮತ್ತು ಖಾತೆ ನಂಬರ್ ಎಂಬ ಎರಡು ಕಲಂಗಳಿರುತ್ತದೆ. ಇತ್ತೀಚಿನವರೆಗೆ ಆರ್.ಟಿ.ಸಿ.ಯಲ್ಲಿ ಬದಲಾವಣೆಯಾದರೆ (ಅಂದರೆ ತಂದೆಯ ಆಸ್ತಿ ಮಕ್ಕಳಲ್ಲಿ ವರ್ಗಾವಣೆಗೊಂಡರೆ ಇತ್ಯಾದಿ) ಹೊಸ ಸರ್ವೆ ನಂಬರ್ ಮತ್ತು ಹೊಸ ಖಾತೆ ನಂಬರ್ ಸಹ ಆರ್.ಟಿ.ಸಿ.ಯಲ್ಲಿ ಬರುತ್ತಿತ್ತು. ಆದರೆ, ಈಗ ಆರ್.ಟಿ.ಸಿ.ಯಲ್ಲಿ ಬದಲಾವಣೆಯಾಗಿ ಹೊಸ ಆರ್.ಟಿ.ಸಿ. ಬಂದಾಗ ಸರ್ವೆ ನಂಬರ್ ಇರುತ್ತದೆ. ಖಾತೆ ನಂಬರ್ ಇರುವುದಿಲ್ಲ. ಇದರಿಂದ ಸಮಸ್ಯೆಗಳು ತಲೆದೋರುತ್ತದೆ. ಆದುದರಿಂದ ಯಾವುದೆಲ್ಲ ಆರ್.ಟಿ.ಸಿ.ಯಲ್ಲಿ ಬದಲಾವಣೆಯಾಗಿ ಹೊಸ ಸರ್ವೆ ನಂಬರ್ ಬಂದಿದೆಯೋ ಅಂತಹ ಎಲ್ಲಾ ಆರ್.ಟಿ.ಸಿ.ಯಲ್ಲಿ ಸರ್ವೆ ನಂಬರ್ ಜೊತೆಗೆ ಖಾತೆ ನಂಬರನ್ನು ಸಹ ನಮೂದಿಸಬೇಕೆಂದು ಆಗ್ರಹಿಸಲಾಗಿದೆ.
ಇತ್ತೀಚೆಗೆ ಕೊಡಗಿನಲ್ಲಿ ಕೆಲವು ಅಧಿಕಾರಿಗಳ ಕುಮ್ಮಕ್ಕಿನಿಂದ ಅನಧಿಕೃತವಾಗಿ ಆಸ್ತಿ ವಿಲೇವಾರಿ ನಡೆದಿರುವುದು ಹಿತರಕ್ಷಣಾ ಸಮಿತಿಯ ಗಮನಕ್ಕೆ ಬಂದಿದ್ದು, ಆಸ್ತಿಯ ಮಾಲೀಕನಿಗೆ ನಿದ್ದೆಕೆಡಿಸಿದೆ. ಖಂಡಿತವಾಗಿಯೂ ಇಂತಹ ಘಟನೆಗಳು ಮರುಕಳಿಸಬಾರದು. ಇಂತಹ ಕೃತ್ಯದಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳನ್ನು ಭಾರತೀಯ ದಂಡ ಸಂಹಿತೆ ಪ್ರಕಾರ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಕೊಡಗಿನಲ್ಲಿ ಹೆಚ್ಚಾಗಿ ಕಾಫಿ, ಕರಿಮೆಣಸು, ಅಡಿಕೆ, ಕಿತ್ತಳೆ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಎಲ್ಲಾ ಬೆಳೆಗಳನ್ನು ಭತ್ತವನ್ನು ಹೊರತುಪಡಿಸಿ ಒಂದು ಸಲ ನಾಟಿ ಮಾಡಿದರೆ ಅನೇಕ ವರ್ಷಗಳವರೆಗೆ ಫಸಲು ಕೊಡುತ್ತದೆ. ಅಂದರೆ ಇವೆಲ್ಲ ನಿರಂತರ ಬೆಳೆಗಳು. ಆರ್.ಟಿ.ಸಿ.ಯಲ್ಲಿ ಒಮ್ಮೆ ಈ ಎಲ್ಲಾ ಬೆಳೆಗಳನ್ನು ನಮೂದಿಸಿದರೆ ಅನೇಕ ವರ್ಷಗಳವರೆಗೆ ಈ ಬೆಳೆಗಳೇ ಇರುತ್ತದೆ. ವಿಪರ್ಯಾಸವೆಂದರೆ ಆರ್.ಟಿ.ಸಿ.ಯಲ್ಲಿ ಆಗಾಗ್ಗೆ ಈ ಬೆಳೆಗಳನ್ನು ಬದಲಿಸಿ ರೈತರಲ್ಲಿ ಗೊಂದಲ ಮೂಡಿಸಲಾಗುತ್ತದೆ. ಉದಾ: ಆರ್.ಟಿ.ಸಿ.ಯಲ್ಲಿ ಕಾಫಿ, ಕರಿಮೆಣಸು ಎಂದು ನಮೂದಿಸಿರುತ್ತದೆ. ೬ ತಿಂಗಳ ನಂತರ ಅದೇ ಆರ್.ಟಿ.ಸಿ.ಯನ್ನು ಪುನಃ ತೆಗೆದರೆ ಅದರಲ್ಲಿ ಭತ್ತ, ರಾಗಿ, ನೋ ಕ್ರಾಪ್ ಎಂದು ನಮೂದಿಸಿರುತ್ತದೆ. ಇದರಿಂದ ಬೆಳೆಗಾರರು ಗೊಂದಲಕ್ಕೆ ಸಿಲುಕುತ್ತಾರೆ. ಆದುದರಿಂದ ಈ ರೀತಿಯ ಲೋಪಕ್ಕೆ ಅವಕಾಶ ನೀಡಬಾರದೆಂದು ಹಾಗೂ ಇನ್ನು ಮುಂದೆ ಕೊಡಗಿನಲ್ಲಿ ಇದಕ್ಕೆ ಸಂಬAಧಿಸಿದAತೆ, ಪ್ರತ್ಯೇಕ ಆ್ಯಪ್ ಹೊರಡಿಸಬೇಕೆಂದು ಗಮನಸೆಳೆಯಲಾಗಿದೆ.
ರೈತರು ತಾವು ತೆಗೆದ ಸಾಲವನ್ನು ಮರುಪಾವತಿ ಮಾಡಿದ ಮೇಲೆ ಸಂಬAಧಪಟ್ಟ ಬ್ಯಾಂಕ್ನ ಅಧಿಕಾರಿಗಳು ಸಾಲ ಕಟ್ಟಿದ್ದಕ್ಕೆ ತೀರುವಳಿ ಪತ್ರವನ್ನು ಕೊಡುತ್ತಾರೆ. ಆ ಪತ್ರವನ್ನು ಉಪನೋಂದಣಾಧಿಕಾರಿಗೆ ಕೊಟ್ಟ ನಂತರ ಅವರು ಕೂಡಲೇ ಆರ್.ಟಿ.ಸಿ.ಯಲ್ಲಿ ಋಣಭಾರವನ್ನು ತೆಗೆಯಲು ತಾಲೂಕು ಕಚೇರಿಗೆ ಶಿಫಾರಸ್ಸು ಮಾಡುತ್ತಾರೆ. ಆದರೆ, ತಾಲೂಕು ಕಚೇರಿಯಲ್ಲಿ ತಿಂಗಳು ಕಳೆದರೂ ಆರ್.ಟಿ.ಸಿ.ಯಲ್ಲಿ ಯಾವುದೇ ಋಣಭಾರಕ್ಕೆ ಸಂಬAಧಪಟ್ಟ ಮಾಹಿತಿಯನ್ನು ಅಧಿಕಾರಿಗಳು ನಮೂದಿಸುವುದಿಲ್ಲ. ಇದರಿಂದ ಬೆಳೆಗಾರರಿಗೆ ಹೊಸ ಸಾಲ ಪಡೆಯಲು ವಿಳಂಬವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ, ತಾಲೂಕು ಕಚೇರಿಯಲ್ಲಿ ಆಗುವ ವಿಳಂಬವನ್ನು ತಪ್ಪಿಸಿ ಬೆಳೆಗಾರರಿಗೆ ಕೂಡಲೇ ಸ್ಪಂದಿಸುವAತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೆಳೆಗಾರರಿಗೆ ಅವರ ಆಸ್ತಿ ಸ್ಥಿರವಾಗಿ ರಕ್ಷಣೆಯಾಗಿ ಉಳಿಯಬೇಕಾದರೆ ಅವರ ಜಾಗಕ್ಕೆ ಸಂಬAಧಪಟ್ಟ ಸರ್ವೆ ನಂಬರ್ ಮತ್ತು ಅವುಗಳ ನಕಾಶೆ ಅತ್ಯವಶ್ಯಕ. ವೀರಾಜಪೇಟೆ ಸರ್ವೆ ಕಚೇರಿಯಲ್ಲಿ ಗ್ರಾಮಗಳಿಗೆ ಸಂಬAಧಪಟ್ಟ ನಕಾಶೆಗಳು ಸರಿಯಾರಿ ಇರುವುದಿಲ್ಲ. ಹೆಚ್ಚಿನ ನಕಾಶೆಗಳು ಹರಿದುಹೋಗಿ, ಸಣ್ಣಪುಟ್ಟ ಕಾಗದದ ಚೂರುಗಳಂತಾಗಿದೆ. ಅದಕ್ಕೆ ಸಂಬAಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಅವರು ತಮ್ಮ ಅಸಹಾಯಕತೆಯನ್ನು ಹೇಳುತ್ತಾರೆ. ಆದುದರಿಂದ ತಾಲೂಕು ಸರ್ವೆ ಕಚೇರಿಯಲ್ಲಿ ಇನ್ನು ಮುಂದೆಯಾದರೂ ಎಲ್ಲಾ ಗ್ರಾಮಗಳ ಸರ್ವೆ ನಕಾಶೆಗಳನ್ನು ಕ್ರಮಬದ್ಧವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.