ಸೋಮವಾರಪೇಟೆ, ಅ. ೬: ಸಮಾಜದಲ್ಲಿ ಉತ್ತಮ ಬದುಕು ರೂಪಿಸಿದ ಶಿಕ್ಷಕರನ್ನು ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಲಯನ್ಸ್ ಸಂಸ್ಥೆಯ ಗವರ್ನರ್ ಗ್ಲೆನ್ ನಿಶಾಂತ್ ಮೆನೇಜಸ್ ಹೇಳಿದರು.

ಇಲ್ಲಿನ ಗೌಡ ಸಮಾಜದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರು ಸದಾ ಸ್ಮರಣೀಯರೂ ಹಾಗೂ ಗೌರವಕ್ಕೆ ಪಾತ್ರರೂ ಆಗಿದ್ದಾರೆ ಎಂದರು.

ಲಯನ್ಸ್ ಸಂಸ್ಥೆ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯು ಸೇವೆ ಮತ್ತು ಆತಿಥ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಎಲ್ಲ ಸದಸ್ಯರು ಅದನ್ನು ಮುಂದುವರೆಸಬೇಕೆAದರು.

ಸನ್ಮಾನ ಸ್ವೀಕರಿಸಿದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾಶಿವ ಪಲ್ಲೇದ್ ಮಾತನಾಡಿ, ಒಬ್ಬ ಶಿಕ್ಷಕ ದಾರಿ ತಪ್ಪಿದಲ್ಲಿ ಅದು ಇಡೀ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಧುನಿಕ ವ್ಯವಸ್ಥೆಯಲ್ಲಿ ಕೇವಲ ಅಂಕಕ್ಕೆ ಮಾತ್ರ ಆದ್ಯತೆ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒತ್ತಡದಿಂದ ಮಕ್ಕಳಲ್ಲಿ ಯಾವುದೇ ಬೆಳವಣಿಗೆ ಕಾಣಲು ಸಾಧ್ಯವಾಗುವುದಿಲ್ಲ. ಇಂದಿನ ಶಿಕ್ಷಣ ಪದ್ಧತಿಯಿಂದಾಗಿ ಶಿಕ್ಷಕರಿಗೂ ಗೌರವ ಕಡಿಮೆಯಾಗುತ್ತಿದೆ ಎಂದರು. ಶಿಕ್ಷಕರಂತೆ ಪೋಷಕರಿಗೂ ಮಕ್ಕಳನ್ನು ತಿದ್ದುವ ಜವಾಬ್ದಾರಿ ಇದೆ. ಅವರ ಮನಸಲ್ಲಿ ಒಳ್ಳೆಯ ಕನಸನ್ನು ಬಿತ್ತಿ, ಅದು ಹೆಮ್ಮರವಾಗಿ ಬೆಳೆಯುವಂತೆ ನೋಡಬೇಕಿದೆ. ಅವರಲ್ಲಿ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಬೆಳೆಯುವಂತೆ ಮಾಡಬೇಕಿದೆ ಎಂದರು. ಇದೇ ಸಂದರ್ಭ ಕಿಬ್ಬೆಟ್ಟ ಶಾಲೆಯ ಶಿಕ್ಷಕಿ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಎಂ.ಪಿ. ವಿಶಾಲಾಕ್ಷಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಪ್ರಥಮ ಮಹಿಳೆ ಟೀನಾ ನಿಶಾಂತ್, ಕಾರ್ಯದರ್ಶಿ ಜಿ.ಎಸ್. ರಾಜಾರಾಮ್, ಖಜಾಂಚಿ ಸಿ.ಕೆ. ರಾಜು, ಮೆಂಟರ್ ಎಸ್.ಎನ್. ಯೋಗೇಶ್ ಉಪಸ್ಥಿತರಿದ್ದರು.