*ಗೋಣಿಕೊಪ್ಪ, ಅ. ೫: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಹೊಸೂರು ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ರಸ್ತೆ ಡಾಂಬರೀಕರಣಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ ಶಾಸಕರು ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೭೪.೫೦ ಲಕ್ಷ ಅನುದಾನದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
೭೪.೫೦ ಲಕ್ಷದಲ್ಲಿ ಹೊಸೂರು ಗ್ರಾ.ಪಂ. ಕಳತ್ಮಾಡು ಈಶ್ವರ ದೇವಸ್ಥಾನ ರಸ್ತೆಯ ಬದಿ ತÀಡೆಗೋಡೆ ನಿರ್ಮಾಣಕ್ಕೆ ೧೨ ಲಕ್ಷ, ಹೊಸೂರು ಕಳತ್ಮಾಡು ಈಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ೧೪.೨೦ ಲಕ್ಷ, ಚುಂಡೇಗಾರಿ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ರೂ. ೫ ಲಕ್ಷ, ಜೇಡಿ ಮುಖ್ಯ ರಸ್ತೆ ಅಭಿವೃದ್ಧಿ ರೂ. ೬.೮೦ ಲಕ್ಷ, ಪೊದ್ರಿಮಾಡ ಕುಟುಂಬಸ್ಥರ ರಸ್ತೆ ಅಭಿವೃದ್ಧಿ ರೂ. ೬ ಲಕ್ಷ, ಕಳತ್ಮಾಡು ಹೊಸಕೋಟೆ ರಸ್ತೆ ರೂ. ೩.೬೦ ಲಕ್ಷ, ಹೊಸೂರು ಕುಂಜಿರ ರಸ್ತೆ ಅಭಿವೃದ್ಧಿ ರೂ. ೧.೨೦ ಲಕ್ಷಗಳು, ಕಳತ್ಮಾಡು ಗೊಟ್ಟಡ ರಸ್ತೆ ಅಭಿವೃದ್ಧಿ ರೂ. ೧.೨೦ ಲಕ್ಷ, ದುಬಾರೆ ಕಲ್ಲುಕೋರೆ ರಸ್ತೆ ಅಭಿವೃದ್ಧಿ ರೂ ೧.೮೦ ಲಕ್ಷ, ಪೊದ್ರಿಮಾಡ ಪಂದ್ಯAಡ ಸ್ಮಶಾನ ರಸ್ತೆ ಅಭಿವೃದ್ಧಿ ರೂ. ೧.೮೦ ಲಕ್ಷ, ಜಾಗಿರಿ ಕಾವೇರಿ ಲಿಂಕ್ ರಸ್ತೆ ಅಭಿವೃದ್ಧಿ ರೂ. ೦.೯೦ ಲಕ್ಷ, ಹೊಸೂರು ಕಳತ್ಮಾಡು ಈಶ್ವರ ದೇವಸ್ಥಾನ ರಸ್ತೆಯಲ್ಲಿ ಮೋರಿ ನಿರ್ಮಾಣ ರೂ. ೧.೫೦ ಲಕ್ಷ, ಹೊಸಕೋಟೆ ಸಂಪರ್ಕ ರಸ್ತೆಯಲ್ಲಿ ೨ ಮೋರಿಗಳ ನಿರ್ಮಾಣ ರೂ. ೩ ಲಕ್ಷ, ಜೇಡಿ ದೇವಸ್ಥಾನ ರಸ್ತೆಯಲ್ಲಿ ೨ ಮೋರಿಗಳ ನಿರ್ಮಾಣ ರೂ. ೩ ಲಕ್ಷ, ವ್ಯಾಪ್ತಿಯ ಬೆಟ್ಟಗೇರಿ ಗ್ರಾಮದ ಶ್ರೀ. ಜೇಡಿಮಾರಿಯಮ್ಮ ದೇವಾಲಯದ ಸುತ್ತಲು ತಡೆಗೋಡೆ ನಿರ್ಮಾಣ ರೂ. ೩ ಲಕ್ಷ, ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಹೆಚ್ ಬೆಟ್ಟಗೇರಿ ಶೌಚಾಲಯ ನಿರ್ಮಾಣ ರೂ. ೧ ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳತ್ಮಾಡು ಶೌಚಾಲಯ ನಿರ್ಮಾಣ ರೂ. ೧ ಲಕ್ಷ, ಸ.ಹಿ.ಪ್ರಾ. ಶಾಲೆಯ ಬೆಟ್ಟಗೇರಿ ಕೊಠಡಿಗಳ ದುರಸ್ತಿ ರೂ. ೨ ಲಕ್ಷ, ಸ.ಹಿ.ಪ್ರಾ. ಶಾಲೆ (ತಮಿಳು) ದುಬಾರೆ ಕೊಠಡಿ ದುರಸ್ತಿ ರೂ. ೧.೫೦ ಲಕ್ಷ, ಬೆಟ್ಟಗೇರಿ ದೇವರ ಕೆರೆ ಅಭಿವೃದ್ಧಿ ರೂ. ೨ ಲಕ್ಷ,. ಕಳತ್ಮಾಡು ಗ್ರಾಮದ ಕೊಡವ ಸಂಘ ಅಭಿವೃದ್ಧಿ ರೂ. ೨ ಲಕ್ಷ ರೂಪಾಯಿಗಳಲ್ಲಿ ಕಾಮಗಾರಿ ನಡೆಯುವುದಾಗಿ ಶಾಸಕರು ತಿಳಿಸಿದರು.
ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪಂದ್ಯAಡ ಶಾಂತಿ ಸೋಮಯ್ಯ, ಉಪಾಧ್ಯಕ್ಷ ಕೊಲ್ಲಿರ ಧನು, ಜಿ.ಪಂ. ಮಾಜಿ ಸದಸ್ಯರುಗಳಾದ ಮೂಕೊಂಡ ವಿಜುಸುಬ್ರಮಣಿ, ಕೊಲ್ಲಿರ ಧರ್ಮಜ ಉತ್ತಪ್ಪ, ಗ್ರಾ.ಪಂ. ಸದಸ್ಯ ಕೊಲ್ಲಿರ ಗೋಪಿ ಚಿಣ್ಣಪ್ಪ, ಮಾಜಿ ಸದಸ್ಯ ನರಸಿಂಹ, ಬಿಜೆಪಿ ತಾಲೂಕು ವಕ್ತಾರ ಕುಟ್ಟಂಡ ಅಜಿತ್‌ಕರುಂಬಯ್ಯ, ಶಕ್ತಿ ಕೇಂದ್ರದ ಪ್ರಮುಖ್ ಮುರುವಂಡ ಸಾಬು, ಸಹಪ್ರಮುಖ್ ಚೋವಂಡ ಅಭಿನ್ ಮಂದಣ್ಣ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
- ಎನ್.ಎನ್. ದಿನೇಶ್