(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಅ. ೫: ಕಳೆದ ಕೆಲವು ವರ್ಷಗಳ ಹಿಂದೆ ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಾದಾಗ ಇಲ್ಲಿನ ತೋಟ ಮಾಲೀಕರು ಅನಿವಾರ್ಯವಾಗಿ ಅಸ್ಸಾ ಕಾರ್ಮಿಕರ ಮೊರೆ ಹೋದರು. ಆರಂಭದಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಅಸ್ಸಾಮಿಗರು ನಂತರ ಸಾವಿರ ಸಂಖ್ಯೆಯಲ್ಲಿ ಕೊಡಗಿನ ಕಾಫಿತೋಟದಲ್ಲಿ ನೆಲೆ ಕಂಡುಕೊAಡರು. ಇದೀಗ ದ. ಕೊಡಗಿನಲ್ಲಿ ೩೫ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ವಿವಿಧ ತೋಟದಲ್ಲಿ ನೆಲೆಸಿದ್ದಾರೆ.

ವಾರದ ಒಂದು ದಿನ ನಗರ ಪ್ರದೇಶಕ್ಕೆ ಆಗಮಿಸಿ ತಮಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಖರೀದಿಸಿ ವಾಪಾಸ್ಸು ತೆರಳುತ್ತಿದ್ದ ಇವರು ನಂತರ ಮುಂದಿನ ವಾರದ ಸಂತೆಗೆ ತಂಡೋಪತAಡವಾಗಿ ಆಗಮಿಸುತ್ತಿದ್ದರು. ನಗರದಲ್ಲಿ ನಡೆಯುತ್ತಿದ್ದ ವ್ಯಾಪಾರೋದ್ಯಮಕ್ಕೆ ಆಕರ್ಷಿತರಾದ ಇವರು ನಗರದಲ್ಲಿ ಸಂತೆ ವ್ಯಾಪಾರ ದಿನದಂದು ತಾವೇ ವ್ಯಾಪಾರಕ್ಕಿಳಿದರು. ಆರಂಭದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ವ್ಯಾಪಾರ ಆರಂಭಿಸಿದ ಇವರು ನಂತರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕಿಳಿದರು.

ಅನೇಕ ತೋಟ ಮಾಲೀಕರು ಕಾರ್ಮಿಕರ ಹಿತದೃಷ್ಟಿಯಿಂದ ತೋಟದಲ್ಲಿ ಬೆಳೆದ ತರಕಾರಿಗಳನ್ನು ಉಚಿತವಾಗಿ ಅಸ್ಸಾ ಕಾರ್ಮಿಕರಿಗೆ ನೀಡುತ್ತಿದ್ದರು. ಈ ತರಕಾರಿ ವಸ್ತುಗಳನ್ನು ಕ್ರೋಢೀಕರಿಸಿ ಚೀಲದಲ್ಲಿ ತುಂಬಿ ಗೋಣಿಕೊಪ್ಪ ಮಾರುಕಟ್ಟೆ ವ್ಯಾಪ್ತಿಯಲ್ಲಿ ವ್ಯಾಪಾರ ಶುರುವಿಟ್ಟುಕೊಂಡಿದ್ದರು. ಇದರಿಂದ ಲಾಭಾಂಶವನ್ನು ಕಂಡುಕೊAಡ ಇವರು ತೋಟದ ಮಾಲೀಕರ ಗಮನಕ್ಕೆ ಬಾರದಂತೆ ಇನ್ನಿತರ ಬೆಲೆ ಬಾಳುವ ಅಗತ್ಯ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಕಾರ್ಯ ಪ್ರವೃತ್ತರಾದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ವಾರದ ಸಂತೆ ದಿನದಂದು ಇಂತಹ ಅನಧಿಕೃತ ಅಸ್ಸಾ ಕಾರ್ಮಿಕರನ್ನು ಪತ್ತೆಹಚ್ಚಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಲ್ಲದೆ ಮತ್ತೆ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈ ವೇಳೆ ಕೆಲವು ಅಸ್ಸಾಮಿಗರು ವ್ಯಾಪಾರಕ್ಕೆ ಅಡ್ಡಿ ಪಡಿಸಿರುವುದನ್ನು ಆಕ್ಷೇಪಿಸಿದ್ದಾರೆ. ದೂರದ ಊರುಗಳಿಂದ ಅಸ್ಸಾಮಿಗರ ಹೆಸರಿನಲ್ಲಿ ಆಗಮಿಸುತ್ತಿರುವವರ ಬಗ್ಗೆ ಸಂಶಯವಿದ್ದು ಇವರೊಂದಿಗೆ ಬಾಂಗ್ಲಾ ದೇಶದಿಂದ ಕಾರ್ಮಿಕರ ಸೋಗಿನಲ್ಲಿ ಕೆಲವು ಮಂದಿ ಇಲ್ಲಿ ನೆಲೆಸಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ವ್ಯಾಪಾರದ ವೇಳೆ ಅನೇಕ ಮಂದಿ ಇವರೊಂದಿಗೆ ಕುಳಿತು ಗಂಟೆಗಟ್ಟಲೆ ಚರ್ಚೆ ನಡೆಸುತ್ತಿರುವುದು ತೀವ್ರ ಸಂಶಯಕ್ಕೆಡೆಮಾಡಿಕೊಟ್ಟಿದೆ.

ಕೂಲಿ ಅರಸಿ ದೂರದ ಸಾವಿರಾರು ಕಿ.ಮೀ.ನಿಂದ ಕೊಡಗಿನ ಕಾಫಿ ತೋಟಗಳಿಗೆ ಬಂದಿರುವ ಇವರು ಇದೀಗ ಹಂತ ಹಂತವಾಗಿ ಇಲ್ಲಿನ ಪರಿಸರಕ್ಕೆ ಹೊಂದಿಕೊAಡು ವ್ಯಾಪಾರೋದÀ್ಯಮದತ್ತ ಹೆಜ್ಜೆ ಇಟ್ಟಿರುವುದು ತೀವ್ರ ಸಂಶಯಕ್ಕೀಡುಮಾಡಿದೆ.

ಈಗಾಗಲೇ ಕೊಡಗಿನಲ್ಲಿ ಅಸ್ಸಾಮಿಗರ ಸಂಖ್ಯೆ ಬೆಟ್ಟದಷ್ಟಿದೆ. ಇಲ್ಲಿನ ಮೂಲ ನಿವಾಸಿಗಳು ಅಳಿವಿನಂಚಿಗೆ ಸರಿದಿದ್ದಾರೆ. ಈಗಾಗಿ ಇದರ ಲಾಭ ಪಡೆದ ಅಸ್ಸಾಮಿಗರು ಇಲ್ಲಿಯೇ ಆಧಾರ್, ಪಡಿತರಚೀಟಿ ಮಾಡಿಸಲು ಮುಂದಾಗಿದ್ದಾರೆ. ಹಲವು ಕಾರ್ಮಿಕರಿಗೆ ಈ ರೀತಿಯ ದಾಖಲೆ ಒದಗಿಸಲು ಕೆಲವು ತೋಟದ ಮಾಲೀಕರು ಆಸಕ್ತಿ ವಹಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಮುಂದಾಳತ್ವದಲ್ಲಿ ಅನಧಿಕೃತ ಅಸ್ಸಾಮಿಗರ ವ್ಯಾಪಾರದ ಮೇಲೆ ದಾಳಿ ನಡೆಸಲಾಯಿತು. ಆಕ್ರೋಶ ವ್ಯಕ್ತಪಡಿಸಿದ ಅಸ್ಸಾಮಿಗರನ್ನು ಪೊಲೀಸರ ವಶಕ್ಕೆ ನೀಡಲಾಯಿತು. ಈ ವೇಳೆಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ಕೆ. ರಾಜೇಶ್, ಗೀತಾ, ಮಾಜಿ ಸದಸ್ಯರಾದ ಸುರೇಶ್‌ರೈ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.